ಪ್ರಯಾಗ್‌ರಾಜ್: ಸನ್ಯಾಸಿನಿ ಮಮತಾ ಕುಲಕರ್ಣಿ (Mamta Kulkarni) ಅವರು ಮತ್ತೆ ಕಿನ್ನರ ಅಖಾಡವನ್ನು (Kinnar Akhada) ಸೇರಿಕೊಂಡಿದ್ದಾರೆ.
ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ತನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸನಾತನ ಧರ್ಮದ ಸೇವೆಯನ್ನು ಮುಂದುವರಿಸಲು ನಾನು ಮತ್ತೆ ಅಖಾಡ ಸೇರಲು ನಿರ್ಧರಿಸಿದ್ದೇನೆ ಎಂದು ಮಮತಾ ಕುಲಕರ್ಣಿ ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
ಎರಡು ದಿನಗಳ ಹಿಂದೆ, ಕೆಲವರು ನನ್ನ ಗುರು ಡಾ. ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಭಾವೋದ್ವೇಗದಿಂದ ರಾಜೀನಾಮೆ ನೀಡಿದ್ದೆ. ಹೀಗಿದ್ದರೂ ನನ್ನ ಗುರುಗಳು ನನ್ನ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ರಾಜಮನೆತನದ ಛತ್ರಿ, ಕೋಲು ಮತ್ತು ಇತರ ಪವಿತ್ರ ವಸ್ತುಗಳನ್ನು ಒಳಗೊಂಡಂತೆ ಮಹಾಮಂಡಲೇಶ್ವರನಾದ (Mahamandaleshwar) ನಂತರ ನಾನು ಅರ್ಪಿಸಿದ ಕಾಣಿಕೆಗಳು ಅಖಾಡಕ್ಕೆ ಸಮರ್ಪಿತವಾಗಿರುತ್ತವೆ. ನನ್ನನ್ನು ಮರುಸ್ಥಾಪಿಸಿದ್ದಕ್ಕಾಗಿ ನನ್ನ ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ. ಮುಂದೆ, ನಾನು ನನ್ನ ಜೀವನವನ್ನು ಕಿನ್ನಾರ ಅಖಾಡ ಮತ್ತು ಸನಾತನ ಧರ್ಮಕ್ಕೆ ಅರ್ಪಿಸುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
View this post on Instagram
ಫೆಬ್ರವರಿ 10 ರಂದು ಅಖಾಡದ ಮಹಾಮಂಡಲೇಶ್ವರ ಸ್ಥಾನಕ್ಕೆ ಮಮತಾ ಕುಲಕರ್ಣಿ ರಾಜೀನಾಮೆ ನೀಡಿದ್ದರು ಎಂದು ವರದಿಯಾಗಿತ್ತು. ಮಹಾಮಂಡಲೇಶ್ವರರಾಗಲು ಮಮತಾ ಹಣವನ್ನು ಪಾವತಿಸಿದ್ದಾರ ಎಂಬ ಆರೋಪಗಳು ಕೇಳಿ ಬಂದಿತ್ತು. ಇದನ್ನೂ ಓದಿ: Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ
90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದರು. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದರು.
ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದರು.
ಮಮತಾ ಕುಲಕರ್ಣಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಕಿನ್ನರ ಅಖಾಡಕ್ಕೆ ಸೇರ್ಪಡೆಯಾಗಿ ಮಹಾಮಂಡಲೇಶ್ವರರಾಗಿದ್ದರು. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದರು.
ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.