ಕೋಲ್ಕತ್ತಾ: ಮನೆಯವರಿಗೆ ಕೋವಿಡ್ ದೃಢಪಟ್ಟಿದ್ದರೂ ಲೆಕ್ಕಿಸದೇ ನೀನು ಹೊರಗಡೆ ಸುತ್ತಾಡುತ್ತಿದ್ದೀಯಾ ಎಂದು ಸಹೋದರನಿಗೆ ಸಾರ್ವಜನಿಕ ವೇದಿಕೆಯಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಛೀಮಾರಿ ಹಾಕಿದ್ದಾರೆ.
ನಮ್ಮ ಮನೆಯಲ್ಲೇ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಆಗದೇ ಕೋವಿಡ್ ನಿಯಮ ಉಲ್ಲಂಘಿಸಿ ಹೊರಗಡೆ ಸುತ್ತಾಡುತ್ತಿದ್ದಾರೆ. ಈ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಪ್ರವೇಶಿಸಿದ್ದ ಬಿಂದು ಮೇಲೆ ನಡು ರಸ್ತೆಯಲ್ಲಿ ದಾಳಿ – ಆರೋಪಿ ಅರೆಸ್ಟ್
ನನ್ನ ಕಿರಿಯ ಸಹೋದರನ ಹೆಂಡತಿಗೆ ಕೋವಿಡ್ ದೃಢಪಟ್ಟಿದೆ. ಆದರೆ ನನ್ನ ಸಹೋದರ ಬಾಬುನ್ ಹೊರಗಡೆ ಸುತ್ತಾಡುತ್ತಿದ್ದಾನೆ. ಈ ನಡೆ ನನಗೆ ಹಿಡಿಸುವುದಿಲ್ಲ. ನಾನು ತುಂಬಾ ಮುಕ್ತವಾಗಿ ಮಾತನಾಡುವ ವ್ಯಕ್ತಿ. ನಾಳೆಯಿಂದ ಎಲ್ಲಿಯೂ ಹೋಗಬೇಡ ಎಂದು ತಮ್ಮನಿಗೆ ಸಿಎಂ ಬ್ಯಾನರ್ಜಿ ಖಡಕ್ ಸೂಚನೆ ನೀಡಿದ್ದಾರೆ.
ನನ್ನ ಏಳು ದಿನಗಳ ಪ್ರತ್ಯೇಕ ವಾಸ ಮುಗಿದಿದೆ ಎಂದು ಹೊರಗಡೆ ಓಡಾಡುವುದಲ್ಲ. ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದಿರಬಹುದು. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಾಸ್ಕ್ ಧರಿಸಬೇಕು, ಆಗಾಗ ಕೈ ತೊಳೆಯಬೇಕು. ನಾಳೆ ನಮಗೇ ಕೋವಿಡ್ ಬಂದರೆ? ಕೋವಿಡ್ ಬಂದರೆ ನಾವು ಜವಾಬ್ದಾರರಾಗುತ್ತೇವೆಯೇ? ಇಲ್ಲ, ಅದಾಗಬಾರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ
ಮುಂದಿನ 15 ದಿನಗಳು ಪ್ರಮುಖವಾಗಿವೆ. ಈ ಸಂದರ್ಭದಲ್ಲಿ ಕೋವಿಡ್ ನಿರ್ಬಂಧಗಳು ಕಠಿಣವಾಗಬಹುದು ಎಂದು ಸಿಎಂ ತಿಳಿಸಿದ್ದಾರೆ.
ಕೋವಿಡ್ ಸ್ಥಿತಿಗತಿ ಕುರಿತು ನಾಳೆ ಪ್ರಧಾನಿ ಮೋದಿ ಅವರು ಸಿಎಂಗಳೊಂದಿಗೆ ವರ್ಚುವಲ್ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ದಿನದ ಕೋವಿಡ್ ಪ್ರಕರಣಗಳ ಸಂಖ್ಯೆ 14,022ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.