ನವದೆಹಲಿ: ದೆಹಲಿಯ ಭೇಟಿ ನೀಡಿದ್ದರೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗದೇ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿಗೆ ಬಂದಾಗಲೆಲ್ಲ ಸೋನಿಯಾ ಗಾಂಧಿ ಅವರನ್ನು ಯಾಕೆ ಭೇಟಿಯಾಗಬೇಕು? ಅದೇನು ಸಾಂವಿಧಾನಿಕವಾಗಿ ಕಡ್ಡಾಯವೇ ಎಂದು ಬ್ಯಾನರ್ಜಿ ಮರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಂದೆ-ತಾಯಿ, ಅತ್ತೆ-ಮಾವರೊಂದಿಗೆ ಹೊಸ ವರ್ಷ ಆಚರಿಸಲು ನೌಕರರಿಗೆ 4 ದಿನ ರಜೆ- ಅಸ್ಸಾಂ ನಿರ್ಧಾರ
ಡಿ.1ರಂದು ಮುಂಬೈಗೆ ತೆರಳುತ್ತಿದ್ದೇನೆ. ಅಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್- ಒಂದು ಸೀಟ್ ಗೆಲ್ಲದ ಟಿಎಂಸಿ ಈಗ ವಿಪಕ್ಷ
ಸೋಮವಾರ ದೆಹಲಿಗೆ ಬಂದಿದ್ದ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅವರು ಭೇಟಿಯಾಗಿಲ್ಲ. ಬಿಹಾರ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಿಗೆ ತಮ್ಮ ಪಕ್ಷವನ್ನು ವಿಸ್ತರಿಸುವ ಉದ್ದೇಶವನ್ನು ಬ್ಯಾನರ್ಜಿ ಅವರು ವ್ಯಕ್ತಪಡಿಸಿದ್ದಾರೆ.