ಕೋಲ್ಕತ್ತಾ: ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ನ್ಯಾಯ ಕೇಳಲು ಹೋದರೆ, ಅವರನ್ನೇ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸುತ್ತಾರೆ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ. ಯುಪಿಯಲ್ಲಿ ಅತ್ಯಾಚಾರ ಸಂತ್ರಸ್ತೆಯರನ್ನೇ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ತಪ್ಪು ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?
Advertisement
Advertisement
ಇತರರು ನನ್ನ ಬಗ್ಗೆ ಏನು ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಜನರಿಗೆ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇದೆ. ದುರ್ಗಾ ಪೂಜೆ ಮಾಡುವವರು ಈದ್ ಕೂಡ ಸಹ ಆಚರಿಸುತ್ತಾರೆ. ನಾವು ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ನಮ್ಮ ಸರ್ಕಾರಕ್ಕೆ 11 ವರ್ಷಗಳಾಗಿವೆ. ಯಾರಿಗಾದರೂ ಧೈರ್ಯವಿದ್ದರೆ, ಈ 11 ವರ್ಷಗಳಲ್ಲಿ ನಾನು ಮಾಡಿದ ಸಾಧನೆಯನ್ನು ಮಾಡಿ ತೋರಿಸುತ್ತೇವೆಂದು ಸವಾಲು ಹಾಕಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್‍ಸಾಹೇಬ್ ಪಾಟೀಲ್ ದಾನ್ವೆ
Advertisement
ನನ್ನ ವಿರುದ್ಧ ಮಾತನಾಡುವುದು, ದಾರಿತಪ್ಪಿಸುವುದು ಮತ್ತು ಷಡ್ಯಂತ್ರ ರೂಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜಕೀಯ ಬದಲು ಸಮಾಜಸೇವೆ ಮಾಡಬೇಕು. ನಾನು ಅಧಿಕಾರದಲ್ಲಿ ಇರುವವರೆಗೂ ಬಂಗಾಳಕ್ಕಾಗಿ ದುಡಿಯುತ್ತೇನೆ. ಬಂಗಾಳದ ನನ್ನ ತಾಯಂದಿರು, ಸಹೋದರಿಯರ ಮೇಲೆ ಪ್ರಮಾಣ ಮಾಡಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಬ್ಯಾನರ್ಜಿ ಮಾತನಾಡಿದ್ದಾರೆ.