ಕೋಲ್ಕತ್ತಾ: ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಹಾಗೂ ರೈಲುಗಳಲ್ಲಿ ಮೂಲ ಸೌಕರ್ಯಗಳನ್ನು ಕಡೆಗಣಿಸಿ, ವಂದೇ ಭಾರತ್ ರೈಲುಗಳ ಬಗ್ಗೆ ಮಾತ್ರ ಪಬ್ಲಿಸಿಟಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಿಡಿ ಕಾರಿದ್ದಾರೆ.
#WATCH | Kanchenjunga Express train accident: West Bengal CM Mamata Banerjee says “I started so many things, but they are only doing publicity of Vande Bharat trains. Where is Duronto Express? After the Rajdhani Express, Duronto was the fastest train…Today, the entire Railway… pic.twitter.com/nxI0kFCedY
— ANI (@ANI) June 17, 2024
Advertisement
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ರೈಲು ದುರಂತದ ಕುರಿತು ಮಾತನಾಡಿದ ಸಿಎಂ, ರೈಲ್ವೆ ಸುರಕ್ಷತೆಗಾಗಿ ನಾನು ಅನೇಕ ಕೆಲಸಗಳನ್ನು ಪ್ರಾರಂಭಿಸಿದ್ದೇನೆ. ಆದ್ರೆ ಬಿಜೆಪಿಯವರು ವಂದೇ ಭಾರತ್ (Vande Bharat) ಬಗ್ಗೆ ಪಬ್ಲಿಸಿಟಿ ಮಾಡ್ತಿದ್ದಾರೆ. ರಾಜಧಾನಿ ಎಕ್ಸ್‌ಪ್ರೆಸ್ ನಂತರ ದುರೊಂತೊ ಎಕ್ಸ್‌ಪ್ರೆಸ್ (Duronto Express) ಅತ್ಯಂತ ವೇಗದ ರೈಲು, ಈಗ ಅದು ಎಲ್ಲಿದೆ? ಇದೆಲ್ಲವು ರೈಲ್ವೆ ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನೂ ಓದಿ: ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?
Advertisement
#WATCH | Kanchenjunga Express train accident: West Bengal CM Mamata Banerjee says “When I was the Railways Minister, I saw 2-3 major train accidents after that I ensured that the anti-collision device was prepared and started. After that collision of trains stopped. What is… pic.twitter.com/X212bxFhFJ
— ANI (@ANI) June 17, 2024
Advertisement
ಕೇಂದ್ರ ಸರ್ಕಾರ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಪ್ರಯಾಣಿಕರ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿದೆ. ಸ್ಲೀಪರ್ ಕೋಚ್‌ಗಳಲ್ಲಿ ರಾತ್ರಿ ಪ್ರಯಾಣಿಸುವವರಿಗೆ ಕಳಪೆ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಕೋಚ್‌ಗಳಲ್ಲಿ ಶೌಚಾಲಯಗಳಲ್ಲಿ ಶುಚಿತ್ವವೂ ಇರುವುದಿಲ್ಲ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಯೋಜನೆಗಳನ್ನು ಉದ್ಘಾಸಿಟುವ ವೇಳೆ ಮಾತ್ರ ಆ ಇಲಾಖೆಗಳನ್ನು ನೋಡುವಂತಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕಳೆದ 3 ದಶಕಗಳಲ್ಲಿ ದೇಶ ಕಂಡ ಡೆಡ್ಲಿ ರೈಲು ದುರಂತಗಳ ಬಗ್ಗೆ ನಿಮಗೆ ಗೊತ್ತಾ?
Advertisement
ರೈಲ್ವೆ ಇಲಾಖೆ (Railway Department) ಈಗ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಬಜೆಟ್ ಕೊರತೆಯಿಂದ ಪೋಷಣೆ ಮಾಡುವವರೇ ಇಲ್ಲದಂತಾಗಿದೆ. ನಾನೂ ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈಗಿನ ಸರ್ಕಾರ ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ, ಸುರಕ್ಷತಾ ಅಧಿಕಾರಿಗಳು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ರೈಲ್ವೆ ಸಿಬ್ಬಂದಿಗೆ ನೀಡಲಾಗಿದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನೂ ಹಿಂಪಡೆಯಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಹಿಂದೆ ರೈಲುಗಳ ಸುರಕ್ಷತೆಗಾಗಿ ನಮ್ಮ ಸರ್ಕಾರ ವ್ಯವಸ್ಥೆಗೊಳಿಸಿದ್ದ ಆಂಟಿ-ಕೊಲ್ಯೂಷನ್ ಸಾಧನವನ್ನು ಬಿಜೆಪಿ ʻಕವಚʼ ಎಂದು ಮರುನಾಮಕರಣ ಮಾಡಿದೆ. ಈ ವ್ಯವಸ್ಥೆಯು ಚಾಲಕ ನಿದ್ರಿಸುತ್ತಿದ್ದರೆ ಅಲಾರಂ ನಿಂದ ಎಚ್ಚರಿಸುತ್ತದೆ. ಎರಡೂ ರೈಲುಗಳು ಒಂದೇ ಟ್ರ್ಯಾಕ್‌ನಲ್ಲಿ ಬಂದರೆ ನಿಲ್ಲುತ್ತದೆ. ಬಿಜೆಪಿ ಇದನ್ನು ಮರುನಾಮಕರಣ ಮಾಡಿದರೂ ಪರವಾಗಿಲ್ಲ, ಆದ್ರೆ ಜನರಿಗೆ ಅದು ರಕ್ಷಾಕವಚವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಜನಜುಂಗಾ ಎಕ್ಸ್‌ರೈಲು (Kanchanjunga Express Train) ಅಪಘಾತ ನಡೆದ ಸ್ಥಳಕ್ಕೆ ಸದ್ಯ ವೈದ್ಯಕೀಯ ತಂಡಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸಲಾಗಿದೆ. ಅಪಘಾತದಲ್ಲಿ ಸಂತ್ರಸ್ತರನ್ನ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ
ಡಾರ್ಜಿಲಿಂಗ್ ಘಟನೆ ಏನು?
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 9ಕ್ಕೆ ಏರಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.