ಬಾಲಿವುಡ್‌ನಲ್ಲಿ (Bollywood) ಹಲವಾರು ವರ್ಷಗಳಿಂದ ಅಮಿತಾಭ್ ಬಚ್ಚನ್ (Amitabh Bachchan) ಸಾಕಷ್ಟು ಸಿನಿಮಾಗಳಲ್ಲಿ ಮನರಂಜನೆ ನೀಡುತ್ತಲೇ ಬಂದಿದ್ದಾರೆ. ಹಿರಿಯ ನಟ ಬಿಗ್ ಬಿ ಕಲಾಸೇವೆಯನ್ನ ಗುರುತಿಸಿ ಅವರಿಗೆ `ಭಾರತ ರತ್ನ ಪ್ರಶಸ್ತಿ’ (Bharatha Ratna Award) ನೀಡಿ ಎಂದು ಮಮತಾ ಬ್ಯಾನರ್ಜಿ (Mamatha Benerjee) ಮನವಿ ಮಾಡಿದ್ದಾರೆ.
Advertisement
ಹಿಂದಿ ಚಿತ್ರರಂಗಕ್ಕೆ ಅಮಿತಾಭ್ ಅವರ ಕಲಾಸೇವೆಯ ಕೊಡುಗೆ ಅಪಾರ. ಪಾತ್ರಗಳೇ ತಾವಾಗಿ ಜೀವ ತುಂಬಿ ನಟಿಸುವ ಮಹಾನ್ ನಟನಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂಬುದು ಕೆಲವು ವರ್ಷಗಳಿಂದ ಕೇಳಿ ಬರುತ್ತಿರುವ ಬಹುದೊಡ್ಡ ಬೇಡಿಕೆ. ಇದೀಗ ಮತ್ತೆ ಈ ವಿಷಯ ಮುನ್ನಲೆಗೆ ಬಂದಿದೆ. ಬಿಗ್ ಬಿ ಕಲಾಸೇವೆಯನ್ನ ಗುರುತಿಸಿ, ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಕೊಲ್ಕತ್ತಾ ಚಿತ್ರೋತ್ಸವದಲ್ಲಿ ದೀದಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ
Advertisement
Advertisement
ಈ ಸಂದರ್ಭದಲ್ಲಿ ಬಿಗ್ ಬಿ (Bigg B) ಕೂಡ ಮಾತನಾಡಿ, ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪೌರಾಣಿಕ ಚಿತ್ರದಿಂದ ಹಿಡಿದು ಐತಿಹಾಸಿಕ ಚಿತ್ರದವರೆಗೂ ಚಿತ್ರರಂಗದಲ್ಲಿ ಹಲವು ಶೈಲಿಯ ಸಿನಿಮಾಗಳು ಬಂದು ಹೋಗಿದೆ. ಈ ಬದಲಾವಣೆ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದೆ. ಈ ಬದಲಾವಣೆ ಸಿನಿಪ್ರೇಕ್ಷಕರನ್ನ ರಾಜಕೀಯ ಮತ್ತು ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುವಂತೆ ಮಾಡಿದೆ ಎಂದು ಮಾತನಾಡಿದ್ದಾರೆ.
Advertisement
ಒಟ್ಟಿನಲ್ಲಿ ಅಮಿತಾಭ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.