ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ: ಮಮತಾ ಬ್ಯಾನರ್ಜಿ

Public TV
2 Min Read
Mamata

– ನನ್ನನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ

ಕೋಲ್ಕತ್ತಾ: ಇಟಲಿಯಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಕೊಡದ ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ಕೇಂದ್ರ ಸರ್ಕಾರಕ್ಕೆ ಅಸೂಯೆ ಇದೆ. ಇಟಲಿಯಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಸ್ಯಾಂಟ್ ಎಜಿಡಿಯೋ ಸಮುದಾಯದ, ರೋಮ್ ಮೂಲದ ಕ್ಯಾಥೋಲಿಕ್ ಫೌಂಡೇಶನ್ ಆಯೋಜಿಸಿದೆ. ಅದರಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಮಮತಾ ಬ್ಯಾನರ್ಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಆದರೆ ನಿನ್ನೆ ಕೇಂದ್ರ ಸಚಿವಾಲಯ ಅವಕಾಶ ಇಲ್ಲ ಎಂದು ಹೇಳಿದೆ. ಹಾಗೇ, ಯಾವುದೇ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವಂತ ಕಾರ್ಯಕ್ರಮ ಇದಲ್ಲ ಎಂದಿದೆ. ಇದನ್ನೂ ಓದಿ:  ಗುಲಾಬ್ ಚಂಡಮಾರುತ ಎಫೆಕ್ಟ್ – ಬೀದರ್‌ನಲ್ಲಿ ಧಾರಾಕಾರ ಮಳೆ

pm narendra modi mamata banerjee

ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಜಾಗತಿಕ ಶಾಂತಿ ಸಂಬಂಧಪಟ್ಟು ರೋಮ್‍ನಲ್ಲಿ ಒಂದು ಸಮ್ಮೇಳನ ಇತ್ತು. ನನಗೂ ಆಮಂತ್ರಣವಿತ್ತು. ಆ ಸಭೆಯಲ್ಲಿ ಜರ್ಮನ್ ಚಾನ್ಸಲರ್, ಪೋಪ್ ಫ್ರಾನ್ಸಿಸ್ ಕೂಡ ಭಾಗವಹಿಸುತ್ತಾರೆ. ನಾನು ಆ ಕಾರ್ಯಕ್ರಮಕ್ಕೆ ಹೋಗಲು ಇಟಲಿ ಕೂಡ ವಿಶೇಷ ಅನುಮತಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ನಿರಾಕರಿಸಿದೆ. ನನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಕೇಳಿದ್ದಕ್ಕೆ ಮುಖ್ಯಮಂತ್ರಿಗಳು ಭಾಗವಹಿಸುವ ಸಮಾರಂಭವಲ್ಲ ಎಂಬ ಉತ್ತರ ಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಸೈಕಲ್‍ನಲ್ಲಿ ಬಟ್ಟೆ ಮಾರುವ ವ್ಯಾಪಾರಿ ಪುತ್ರ UPSC ಪರೀಕ್ಷೆಯಲ್ಲಿ 45ನೇ ರ್‍ಯಾಂಕ್

Mamata 2 1

ನನ್ನನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಹಾಗಂತ ನಾನೇನೂ ವಿದೇಶಗಳಿಗೆ ಭೇಟಿ ನೀಡಲು ತುಂಬ ಆಸಕ್ತಳಾಗಿಯೂ ಇಲ್ಲ. ಆದರೆ ಇದು ದೇಶದ ಗೌರವದ ಪ್ರಶ್ನೆ. ಪ್ರಧಾನಿ ಮೋದಿ ಯಾವಾಗಲೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ನಾನೂ ಕೂಡ ಒಬ್ಬ ಹಿಂದು ಮಹಿಳೆ. ಆದರೂ ನನಗೆ ಅನುಮತಿ ನೀಡಿಲ್ಲ. ಅವರಿಗೆಲ್ಲ ನನ್ನ ಕಂಡರೆ ತುಂಬ ಅಸೂಯೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

Mamata 1

ಇಟಲಿಯಲ್ಲಿ ನಡೆಯಲಿರುವ ಶಾಂತಿ ಸಮ್ಮೇಳನಕ್ಕೆ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಮತ್ತು ಪೋಪ್ ಫ್ರಾನ್ಸಿಸ್ ಸೇರಿ ಸುಮಾರು 500 ಧಾರ್ಮಿಕ ಹಾಗೂ ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *