ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf) ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಯತ್ನಾಳ್ ವಿರುದ್ಧ ಎಫ್‍ಐಆರ್
ಕೋಲ್ಕತ್ತಾದಲ್ಲಿ (Kolkatta) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿವಾದಾತ್ಮಕ ಕಾನೂನಿನ ಜಾರಿಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದರು. ವಕ್ಫ್ ಆಸ್ತಿ ಸಮಸ್ಯೆಯಿಂದ ನಿಮಗೆ ನೋವಾಗಿದೆ ಎಂದು ನನಗೆ ಅರ್ಥವಾಗಿದೆ. ನನ್ನ ಮೇಲೆ ದಯವಿಟ್ಟು ನಂಬಿಕೆ ಇಡಿ, ಬಂಗಾಳದಲ್ಲಿ ಒಡೆದು ಆಳುವಂತದ್ದು ಏನೂ ಸಂಭವಿಸುವುದಿಲ್ಲ. ದೀದಿ ಇಲ್ಲಿದ್ದಾರೆ, ದೀದಿ ನಿಮ್ಮನ್ನು ಮತ್ತು ನಿಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು ಕಾಪಾಡುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ರಾಜಕೀಯ ಪ್ರಚೋದನೆಗಳಿಗೆ ಬಲಿಯಾಗದಂತೆ ಸಮುದಾಯಕ್ಕೆ ಎಚ್ಚರಿಕೆ ನೀಡಿದರು. ಸಹಬಾಳ್ವೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಬದುಕಿ ಮತ್ತು ಬದುಕಲು ಬಿಡಿ. ನಾವು ಒಗ್ಗಟ್ಟಿನಿಂದ ಇರಬೇಕು. ಬಂಗಾಳದಲ್ಲಿ ವಿಭಜಕ ರಾಜಕೀಯ ಬೇರೂರಲು ಬಿಡಬಾರದು. ಬಾಂಗ್ಲಾದೇಶದ (Bangladesh) ಪರಿಸ್ಥಿತಿ ಉಲ್ಲೇಖಿಸಿ, ವಕ್ಫ್ ಮಸೂದೆ ಅಂಗೀಕಾರಕ್ಕೆ ಈ ಸಮಯವು ಸೂಕ್ತವಲ್ಲ. ನಾವು ಈಗ ಈ ಮಸೂದೆಯನ್ನು ಅಂಗೀಕರಿಸಬಾರದಿತ್ತು ಎಂದು ಕೆಲವು ಪ್ರದೇಶಗಳಲ್ಲಿ ಇದು ಉಂಟುಮಾಡಿರುವ ಅಶಾಂತಿಯ ಬಗ್ಗೆ ಗಮನ ಸೆಳೆದರು.ಇದನ್ನೂ ಓದಿ: ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ