ಚೆನ್ನೈ: ಕೋಲ್ಕತ್ತಾ ರಾಜ್ಯಪಾಲ ಲಾ ಗಣೇಶನ್ ಅವರ ಮನೆಯಲ್ಲಿ ನಡೆದಿದ್ದ ಸಮಾರಂಭಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಚೆಂಡೆ ಬಾರಿಸಿದರು.
ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ನಡೆದ ಈ ಕಾರ್ಯಕ್ರಮದಲ್ಲಿ ಚೆಂಡೆ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿಯವರು ಚಂಡೆಯನ್ನು ಬಾರಿಸಿದರು.
Advertisement
Advertisement
ಮಮತಾ ಬ್ಯಾನರ್ಜಿ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಕೋಲ್ಕತ್ತಾದಲ್ಲಿ ದುರ್ಗಾಪೂಜೆಯ ಆಚರಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು 95 ದುರ್ಗಾ ಪೂಜೆಗಳನ್ನು ಒಳಗೊಂಡಿರುವ ಭವ್ಯ ಕಾರ್ನೀವಲ್‍ನಲ್ಲಿ ಬುಡಕಟ್ಟು ನೃತ್ಯಗಾರರ ಗುಂಪಿನೊಂದಿಗೆ ಹೆಜ್ಜೆ ಹಾಕಿದ್ದರು. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್ ಉಗ್ರ ಅಶ್ಫಾಕ್ ಆರಿಫ್ ಗಲ್ಲು ಖಾಯಂ
Advertisement
#MamataBanerjee trying out the traditional ‘Chenda Melam’ , as soon as she arrived for a family function of #WestBengal Governor @LaGanesan , in #Chennai
The visiting #cm spent a min enjoying the beats
She’s not one to let go of a great visual opportunity @MamataOfficial pic.twitter.com/dMkJl1EuWZ
— Sidharth.M.P (@sdhrthmp) November 3, 2022
Advertisement
ಅದಾದ ಬಳಿಕ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಜಾನಪದ ಕಲಾವಿದರೊಂದಿಗೆ ಕೈ ಕೈ ಹಿಡಿದು ನೃತ್ಯ ಮಾಡಿದ್ದರು. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ