ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ರಾಜಕೀಯ ಅಖಾಡಕ್ಕೆ ಇಳಿಯುತ್ತಾರಾ? ಅಂಥದ್ದೊಂದು ಕುತೂಹಲವನ್ನು ಮೂಡಿಸಿದೆ ಮಮತಾ ಬ್ಯಾನರ್ಜಿ (Mamata Banerjee) ಜೊತೆಗಿನ ಫೋಟೋ. ಮಮತಾ ಅವರನ್ನು ಸಲ್ಮಾನ್ ಭೇಟಿ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದಿದಿ ಜೊತೆ ಸಲ್ಮಾನ್ ಹಲವು ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮಾತುಕತೆ ದಿದಿ ಮನೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿಯನ್ನು ಸಲ್ಲು ಭೇಟಿ ಮಾಡಲು ಕಾರಣವೇನು ಎನ್ನುವ ಚರ್ಚೆ ಕೂಡ ಶುರುವಾಗಿದೆ. ತಮ್ಮ ಭೇಟಿಗೆ ಬಂದ ಸಲ್ಮಾನ್ ಅವರನ್ನು ದಿದಿ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸಲ್ಮಾನ್ ಕೂಡ ದಿದಿ ಭೇಟಿಯ ನಂತರ ಸಂಭ್ರಮದಿಂದ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್ ವಿರುದ್ಧ ಪ್ರಕರಣ ದಾಖಲು
ಒಂದು ಕಡೆ ರಾಜಕೀಯ ಮತ್ತೊಂದು ಕಡೆ ಸಿನಿಮಾ ಸಂಬಂಧಿ ಕಾರ್ಯಕ್ರಮಕ್ಕೆ ಏನಾದರೂ ಸಲ್ಲು ಹೋಗಿದ್ದರಾ ಅನ್ನುವ ಪ್ರಶ್ನೆಗೆ ಸಲ್ಲು ಆಪ್ತರು ತಿಳಿಸಿದಂತೆ. ಅದೊಂದು ರಾಜಕೀಯ ಸಂಬಂಧ ಭೇಟಿ ಆಗಿರಲಿಲ್ಲವಂತೆ. ಅಭಿಮಾನಿಗಳನ್ನು ರಂಜಿಸಲು ಸಲ್ಮಾನ್ ‘ದಬಂಗ್ ಟೂರ್’ ಹೆಸರಿನಲ್ಲಿ ಲೈವ್ ಕಾರ್ಯಕ್ರಮ ಮಾಡುತ್ತಾರಂತೆ. ಅಂಥದ್ದೊಂದು ಕಾರ್ಯಕ್ರಮ ನೀಡಲು ಅವರು ಹೋಗಿದ್ದರಂತೆ. ಈ ಸಮಯದಲ್ಲಿ ಭೇಟಿ ಆಗಿದ್ದಾರೆ ಎನ್ನಲಾಗುತ್ತಿದೆ.
ದಬಂಗ್ ಟೂರ್ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಲ್ಮಾನ್ ಕೊಲ್ಕತ್ತಾಗೆ (Kolkata) ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ದಿದಿ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಸಲ್ಮಾನ್ ಅವರಿಗೆ ಜೀವ ಬೆದರಿಕೆ ಇರುವುದರಿಂದ ದಿದಿ ಸರಕಾರ ಅವರಿಗೆ ಹೆಚ್ಚಿನ ಭದ್ರತೆ ನೀಡಿತ್ತಂತೆ. ಹಾಗಾಗಿ ಧನ್ಯವಾದಗಳನ್ನು ಹೇಳಲು ಹೋಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.