ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರು (Mamta Banerjee) ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್ ಹೇಳಿದ್ದಾರೆ.
ಜೂನ್ 4 ರಂದು ಜನಾದೇಶ ಸಿಗಲಿದೆ. ಮಮತಾ ಅವರು 30ಕ್ಕೂ ಹೆಚ್ಚು ಸಂಸದರನ್ನು ಹೊಂದಿರುತ್ತಾರೆ. ಅವರು ಪ್ರಧಾನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಇದು 3 ಅವಧಿಗೆ ಮುಖ್ಯಮಂತ್ರಿಯಾಗಿ ಸಾಬೀತಾಗಿದೆ ಎಂದು ಸೌಗತ ರಾಯ್ (Saugata Roy) ಹೇಳಿದರು. ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗುವ ಸಮಯ ಬಂದಿದೆ: ಕಿಮ್ ಜಾಂಗ್ ಉನ್
Advertisement
Advertisement
76 ವರ್ಷದ ಸೌಗತ ರಾಯ್ ಅವರು ಟಿಎಂಸಿಯಿಂದ ಮಾತ್ರವಲ್ಲದೆ ಬಂಗಾಳದಿಂದಲೂ ಅತ್ಯಂತ ಹಳೆಯ ಅಭ್ಯರ್ಥಿ. ಮಾಜಿ ಕೇಂದ್ರ ಸಚಿವರಾಗಿರುವ ಅವರು ಲೋಕಸಭೆಗೆ 4ನೇ ಬಾರಿ ಸ್ಪರ್ಧೆ ಮಾಡಿದ್ದಾರೆ. ಇದು ನನ್ನ 4 ನೇ ಬಾರಿಯ ಸ್ಪರ್ಧೆಯಾಗಿದೆ. ನಾನು ಮೊದಲ ಬಾರಿಗೆ 1977 ರಲ್ಲಿ ಸಂಸದನಾದಾಗ, ಸ್ಟಾರ್ ಐಕಾನ್‌ಗಳಾದ ಚರಣ್ ಸಿಂಗ್, ಮೊರಾರ್ಜಿ ದೇಸಾಯಿಯಂತಹ ದಿಗ್ಗಜರು ಇದ್ದರು. ಈಗ ನನ್ನನ್ನು ಗೂಗಲ್ ಅಂಕಲ್ ಎಂದು ಕರೆಯುತ್ತಾರೆ. ಯುವ ಸಂಸದರು ಏನಾದರೂ ತಿಳಿದುಕೊಳ್ಳಬೇಕೆಂದರೆ ನನ್ನ ಬಳಿ ಬರುತ್ತಾರೆ ಎಂದು ಹೇಳಿದರು.
Advertisement
Advertisement
ಬಂಗಾಳದಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ಅಮಿತ್ ಶಾ (Amitshah) ಅವರನ್ನು ಗುರಿಯಾಗಿಸಿ ಸೌಗತ ರಾಯ್, ಬಿಜೆಪಿಗೆ ಅಭ್ಯರ್ಥಿಗಳು ಸಿಗಲಿಲ್ಲ, ಹೀಗಾಗಿ ಅವರು ಎಸ್‌ಎಸ್ ಅಹ್ಲುವಾಲಿಯಾ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.