ಮಾತನಾಡುವ ವೇಳೆ ಮೈಕ್‌ ಮ್ಯೂಟ್‌ – ಮಮತಾ ಆರೋಪ ಸುಳ್ಳೆಂದ ಪಿಐಬಿ ಫ್ಯಾಕ್ಟ್‌ ಚೆಕ್‌

Public TV
2 Min Read
MAMATA BANERJEE 2

ನವದೆಹಲಿ: ನೀತಿ ಆಯೋಗದ ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದ ಪಶ್ಚಿಮ ಬಂಗಾಳ (West Bengal) ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಆರೋಪ ಸುಳ್ಳು ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ (PIB Fact Check) ಹೇಳಿದೆ.

ಪಿಐಬಿ ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಸಭೆಯಲ್ಲಿ ಏನಾಯ್ತು ಎಂಬುದನ್ನು ವಿವರಿಸಿದೆ.

ಪಿಐಬಿ ಪೋಸ್ಟ್‌ನಲ್ಲಿ ಏನಿದೆ?
ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ತಪ್ಪು ಹೇಳಿಕೆಯಾಗಿದೆ.

ವರ್ಣಮಾಲೆಯ ಪ್ರಕಾರ ಮಮತಾ ಬ್ಯಾನರ್ಜಿ ಅವರಿಗೆ ಮಧ್ಯಾಹ್ನದ ನಂತರ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಕಚೇರಿಯ ಮನವಿಯ ಮೇರೆಗೆ 7ನೇಯವರಾಗಿ ಮಾತನಾಡಲು ಸೂಚಿಸಲಾಗಿತ್ತು. ಅವರು ಮಾತನಾಡುವ ಸಮಯ ಮಗಿದಿದೆ ಎಂದು ಗಡಿಯಾರ ತೋರಿಸಿತ್ತು. ಆದರೆ ಯಾವುದೇ ಬೆಲ್‌ ಬಾರಿಸಿಲ್ಲ ಎಂದು ಹೇಳಿದೆ. ಇದನ್ನೂ ಓದಿ:ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ: ಡಿಕೆಶಿ

NITI Aayog

ಪಶ್ಚಿಮ ಬಂಗಾಳಕ್ಕೆ (West Bengal) ಬರಬೇಕಿದ್ದ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಯಿಂದ (NITI Aayog Meeting) ಹೊರ ನಡೆದಿದ್ದರು.

ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನ್ನ ಸರದಿಯಲ್ಲಿ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಗಿತ್ತು ಎಂದು ಮಮತಾ ಆರೋಪಿಸಿದ್ದರು.ಇದನ್ನೂ ಓದಿ: 130 Kmph ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್‌

ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದರು. ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ,‌ ತೆಲಂಗಾಣ, ಪಂಜಾಬ್ ಸಿಎಂಗಳು ಮೊದಲೇ ಸಭೆಯನ್ನು ಬಹಿಷ್ಕರಿಸಿದ್ದರು.

Share This Article