ಮಲಯಾಳಂ ನಟಿ ರಚನಾ ನಾರಾಯಣನ್ ಕುಟ್ಟಿ (Rachana Narayanankutty) ತಿರುಪತಿ ತಿಮ್ಮಪ್ಪನ (Tirupati Temple) ದರ್ಶನ ಪಡೆದಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಟ್ಟು ದರ್ಶನ ಪಡೆದಿದ್ದಾರೆ.
ತಿರುಪತಿಗೆ ಭೇಟಿ ಕೊಟ್ಟಿರುವ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಎಲ್ಲಾ ಅಹಂಕಾರಗಳನ್ನು ಮತ್ತು ಅಂಧಕಾರಗಳನ್ನು ನಾಶ ಮಾಡುವ ಭಗವಂತನ ಸನ್ನಿಧಿಯಲ್ಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಬಿ ಡಿಯೋಲ್
ಆರಂಭದಲ್ಲಿ ಇದು ಎಡಿಟೆಡ್ ಫೋಟೋಗಳು ಎಂದು ಅನೇಕರು ಭಾವಿಸಿದ್ದರು. ಫೋಟೋಗೆ ನೀಡಲಾದ ಅಡಿಬರಹ ನೋಡಿ ತಲೆ ಬೋಳಿಸಿಕೊಂಡಿರುವುದು ಸತ್ಯ ಎಂದು ಖಚಿತವಾಗಿದೆ.
ಅಂದಹಾಗೆ, ಲಕ್ಕಿ ಸ್ಟಾರ್, ಅಮೇನ್, ಬ್ಲ್ಯಾಂಕ್ ಕಾಫಿ, ಅರಟ್ಟು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.