ಉಡುಪಿ: ಮಲ್ಪೆ ಕಡಲಿನಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡಿದೆ. ಸೂರ್ಯಾಸ್ತದ ಸಂದರ್ಭ ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಸಮುದ್ರದ ನಡುವೆ ಸುಳಿಗಾಳಿ ಎದ್ದಿದೆ.
Advertisement
ಬಿಸಿಲು ಮತ್ತು ತಂಪಿನ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾದ ಸಂದರ್ಭ ನಿರ್ವಾತ ಪ್ರದೇಶ ಉಂಟಾಗಿ ಸಮುದ್ರದ ನೀರು ಆಗಸಕ್ಕೆ ಚಿಮ್ಮಿದೆ. ಮಲ್ಪೆ ಕಡಲತೀರದಲ್ಲಿ ಸಾವಿರಾರು ಪ್ರವಾಸಿಗರು ಸೇರಿದ್ದರಿಂದ ಅಪರೂಪದ ದೃಶ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್
Advertisement
Advertisement
ಸುಳಿಗಾಳಿಗೆ ಮೀನುಗಾರಿಕಾ ಬೋಟ್ ಸಿಲುಕಿದ್ದರೆ ಅವಘಡ ಸಂಭವಿಸುತ್ತಿತ್ತು. ಈ ಹಿಂದೆ ಒಂದು ಬೋಟ್ ಮಗುಚಿಬಿದ್ದಿತ್ತು. ಬೋಟ್‍ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿತ್ತು ಎಂದು ಸ್ಥಳೀಯರೊಬ್ಬರು ಈ ಹಿಂದಿನ ಮಾಹಿತಿ ಹಂಚಿಕೊಂಡಿದ್ದು, ಬೇಸಿಗೆ ಕಾಲದಲ್ಲಿ ಕಾರ್ಮೋಡ ಆವರಿಸಿ ಮಳೆಯಾದರೆ ಸಮುದ್ರದಲ್ಲಿ ಸುಳಿಗಾಳಿ ಕಾಣಿಸುತ್ತದೆ ಎಂದು ಈ ಹಿಂದಿನ ಘಟನೆ ಬಗ್ಗೆ ಮೆಲುಕು ಹಾಕಿದರು.
Advertisement