ಕಲಬುರಗಿ: ಜಿಲ್ಲೆಯಲ್ಲಿ ಗರ್ಭಿಯರು ಅಪೌಷ್ಟಿಕತೆಯಿಂದ ಬಳಲ್ತಿದ್ದಾರೆ. ಇದಕ್ಕೆ ಕಾರಣ ಅವರು ಅನ್ನಾಹಾರ ಸೇವಿಸದೇ ಇರೋದು. ಅನ್ನಾಹಾರ ಸೇವಿಸದೆ ಇರೋದಕ್ಕೆ ಕಾರಣ ಟಾಯ್ಲೆಟ್ ಸಮಸ್ಯೆ.
ಗರ್ಭಿಣಿಯರ ಅಪೌಷ್ಟಿಕತೆಗೆ ಶೌಚಾಲಯ ಇಲ್ಲದೇ ಇರೋದೇ ಕಾರಣ ಎಂಬ ವಿಚಿತ್ರ ಅಂಶವನ್ನ ಜಿಲ್ಲಾ ಪಂಚಾಯತ್ ಸಿಇಒ ಪತ್ತೆ ಹಚ್ಚಿದ್ದಾರೆ. ಹೆಚ್ಚಿಗೆ ನೀರು, ಅನ್ನ ತಿಂದ್ರೆ ಪದೇ ಪದೇ ಟಾಯ್ಲೆಟ್‍ಗೆ ಹೋಗಬೇಕೆಲ್ಲಾ ಅನ್ನೋ ಭೀತಿಯಿಂದ ಗರ್ಭಿಣಿಯರು ಊಟ ಸೇವಿಸ್ತಿಲ್ವಂತೆ. ಇದನ್ನ ಗಮನಿಸಿದ ಸಿಇಒ ಹೆಪ್ಸಿಬಾ ಈಗ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸ್ತಿದ್ದಾರೆ. ಸ್ವಚ್ಛ ಭಾರತ ಮಿಷನ್ ಅಡಿ ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ಜೊತೆಗೆ ಉಚಿತ ಸೀಮಂತ ಮಾಡುವ ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ.
ಸರ್ಕಾರದ ವತಿಯಿಂದ ಸ್ವಚ್ಛ್ ಭಾರತ್ ಮಿಷನ್ ಕೆಳಗೆ ಏನೆಲ್ಲಾ ಮಾಡೋಕೆ ಅವಕಾಶವಿದ್ಯೋ ಅವುಗಳನ್ನು ಕಲ್ಪಿಸಿ, ಗ್ರಾಮಪಂಚಾಯ್ತಿ ಮುಖಾಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಿ ಸತ್ಕಾರ ಮಾಡುವ ಕುರಿತು ನಿರ್ಧರಿಸಿರುವುದಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಹೆಪ್ಸಿಬಾ ರಾಣಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕಳೆದ ತಿಂಗಳು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲ ಹಂತವಾಗಿ ಅರ್ಜಿ ಸಲ್ಲಿಸಿರುವ 120ಕ್ಕು ಹೆಚ್ಚು ಗರ್ಭಿಣಿಯರ ಪೈಕಿ 80 ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಉಳಿದ ಟಾಯ್ಲೆಟ್‍ಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.
ಒಟ್ಟಿನಲ್ಲಿ ಗರ್ಭಿಣಿಯರ ಸಮಸ್ಯೆಯನ್ನ ಸೂಕ್ಷ್ಮವಾಗಿ ಅರಿತ ಹೆಪ್ಸಿಬಾ ಅವರ ಈ ಕಾರ್ಯ ಶ್ಲಾಘನಾರ್ಹವಾಗಿದೆ.