Connect with us

ನನ್ನಿಂದಲೇ ಪಕ್ಷ ಎಂಬ ಭಾವನೆ ಯಾರಿಗೂ ಬೇಡ: ಖರ್ಗೆ

ನನ್ನಿಂದಲೇ ಪಕ್ಷ ಎಂಬ ಭಾವನೆ ಯಾರಿಗೂ ಬೇಡ: ಖರ್ಗೆ

ಕಲಬುರಗಿ: ಪಕ್ಷದಲ್ಲಿ ಅಧಿಕಾರ ಪಡೆದು ಈಗ ಪಕ್ಷದ ವಿರುದ್ಧವೇ ಮಾತನಾಡುತ್ತಿರುವವರ ವಿರುದ್ಧ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನಿಂದಲೇ ಪಕ್ಷ ಅನ್ನೋ ಭಾವನೆ ಯಾರಲ್ಲೂ ಇರಬಾರದು. ಪಕ್ಷದಿಂದ ಸಹಾಯ ಪಡೆದು ಇದೀಗ ಹಗುರವಾಗಿ ಮಾತನಾಡಬಾರದು ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಪಕ್ಷದಿಂದ ಉನ್ನತ ಸ್ಥಾನ ಮತ್ತು ಹೆಸರು ಪಡೆದು ಇದೀಗ ಪಕ್ಷದ ವಿರುದ್ಧ ಮಾತನಾಡಿ ಹೋಗುತ್ತಿದ್ದಾರೆ. ಪಕ್ಷಕ್ಕೆ ಯಾರಿಂದ ಒಳ್ಳೆಯದಾಗುತ್ತದೋ ಅವರನ್ನು ಇಟ್ಟು ಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಆಂತರಿಕ ಕಚ್ಚಾಟ ಬಿಟ್ಟು ಎಲ್ಲರೂ ಒಗ್ಗಟಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement
Advertisement