– ವಿಜಯೇಂದ್ರ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಆದ್ರೆ ಹೊಸ ಪಕ್ಷ ಕಟ್ತೀನಿ ಎಂದ ಶಾಸಕ
ಬೆಳಗಾವಿ: ಡಿಕೆಶಿ, ಸತೀಶ್ ಜಾರಕಿಹೊಳಿ ಇಬ್ಬರೂ ಸಿಎಂ ಆಗಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕನೇರಿ ಮಠದ ಸ್ವಾಮೀಜಿ ಬೆಂಬಲಿಸಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್‌ನಲ್ಲಿ ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್

ಡಿಕೆಶಿಯನ್ನ ಸಿಎಂ ಮಾಡ್ತೀನಿ ಅಂತ ನೀವು ಡಿಸೈಡ್ ಮಾಡಿದ್ರೆ, ನಾನು ಸತೀಶ್ ಪರವಾಗಿ ನಿಲ್ತೀನಿ ಅಂತ ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ. ತಮ್ಮ ಮಗನನ್ನು ಕಳಿಸಿ ಸಂದೇಶ ಸಾರಿದ್ದಾರೆ ಸಿಎಂ ಸಿದ್ದರಾಮಯ್ಯ ಯತ್ನಾಳ್ ಆರೋಪ ಮಾಡಿದ್ದಾರೆ.
ವಿಜಯೇಂದ್ರ ಮರಳಿ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೆ ನಾನು ಹೊಸ ಪಕ್ಷ ಕಟ್ಟುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಜೆಸಿಬಿ ಹೆಸರಲ್ಲಿ ಹೊಸ ಪಕ್ಷ ಕಟ್ಟುತ್ತೇನೆ. ಜೆ ಅಂದ್ರೆ ಜೆಡಿಎಸ್‌ನಲ್ಲಿ, ಸಿ ಅಂದ್ರೆ ಕಾಂಗ್ರೆಸ್ ಹಾಗೂ ಬಿ ಅಂದ್ರೆ ಬಿಜೆಪಿಯಲ್ಲಿ ನೊಂದವರು ನಮ್ಮ ಪಕ್ಷ ಸೇರುತ್ತಾರೆ. ಈಗ ಬಿಜೆಪಿಯಲ್ಲಿರುವ 50 ಕ್ಕೂ ಅಧಿಕ ಶಾಸಕರ ಬೆಂಬಲ ನನಗಿದೆ. ಹೆಚ್ಚಿನ ಸಂಖ್ಯೆಯ ಸಂಸದರ ಬೆಂಬಲವೂ ನನಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ವಿಜಯೇಂದ್ರರನ್ನು ಅಧ್ಯಕ್ಷ ಮಾಡಬಾರದು. ಒಂದು ವೇಳೆ ವಿಜಯೇಂದ್ರ ಅಧ್ಯಕ್ಷರಾದ್ರೆ ನಾನು ಜೆಸಿಬಿ ಪಕ್ಷ ಕಟ್ಟುವೆ. ಜೆಸಿಬಿ ಪಾರ್ಟಿ ರಚನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ. ನಾನು ಹೋದ ಕಡೆಗಳಲ್ಲಿ ಜನಬೆಂಬಲ ಸಿಗ್ತಿದೆ. ಹಿಂದುತ್ವದ ಆಧಾರದ ಮೇಲೆ ಪಕ್ಷ ಕಟ್ಟುವೆ ಎಂದು ತಿಳಿಸಿದರು. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್
ನರೇಂದ್ರ ಮೋದಿ ಜನರಿಂದ ಆದ ನಾಯಕ. ದೇಶದಲ್ಲಿ ಒಂದು ಸಂಚಲನ ಆಯ್ತು. ಮೋದಿಯವರ ನಂತರ ಯೋಗಿ ಆದಿತ್ಯನಾಥ್ ಪಿಎಂ ಆಗಬೇಕು ಎಂದು ಜನ ಬಯಸಿದ್ದಾರೆ. ಹಾಗೆಯೇ ರಾಜ್ಯದ ಜನರ ಆಶಾವಾದವಿದೆ. ಜನರಲ್ಲಿ ಯತ್ನಾಳ್ ಸಿಎಂ ಆಗಬೇಕು ಎನ್ನುವುದಿದೆ. ಇಲ್ಲಾವಾದರೆ ನಂದು ಜೆಸಿಬಿ ಪಾರ್ಟಿ ರೆಡಿ ಇದೆ. ಮುಂದಿನ ಚುನಾವಣೆವಣೆಯೊಳಗೆ ಹೈಕಮಾಂಡ್ ಕರೆಯಲಿ. ಕರೆಯದಿದ್ದರೆ ನಂದು ಜೆಸಿಪಿ ಪಾರ್ಟಿ ರೆಡಿ ಇದೆ ಎಂದು ಹೇಳಿದರು.

