ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ಚುರುಕು ಮಾಡಿರುವ ಜಾರಿ ನಿರ್ದೇಶನಾಲಯ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮತ್ತೊಮ್ಮೆ ಸಮನ್ಸ್ ನೀಡಿದೆ. ಅವರ ಸಮ್ಮುಖದಲ್ಲಿ ಯಂಗ್ ಇಂಡಿಯಾ ಕಚೇರಿಯಲ್ಲಿ ಶೋಧ ನಡೆಸಿದೆ. ಈ ವಿಚಾರ ಇಂದು ರಾಜ್ಯಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ವಿಚಾರಣೆಗೆ ಮುನ್ನ, ಮೇಲ್ಮನೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಇಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದೆ. ಅಧಿವೇಶನದ ನಡುವೆ ಈ ರೀತಿಯ ಸಮನ್ಸ್ ಎಷ್ಟು ಸರಿ ಎಂದು ಪ್ರಶ್ನಿಸಿದರು. ಸೋನಿಯಾ, ರಾಹುಲ್ ನಿವಾಸಗಳನ್ನು ಪೊಲೀಸರು ಸುತ್ತುವರೆದಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ 2-3 ತಿಂಗಳಲ್ಲಿ ಜಾಮರ್ ಅಳವಡಿಕೆ: ಆರಗ ಜ್ಞಾನೇಂದ್ರ
Advertisement
ಈ ಆರೋಪಕ್ಕೆ ಇತರೆ ಸದಸ್ಯರು ದನಿಗೂಡಿಸಿದರೆ ಆಡಳಿತ ಪಕ್ಷದ ಸದಸ್ಯರು ಇದನ್ನು ಆಕ್ಷೇಪಿಸಿದರು. ಲೋಕಸಭೆಯಲ್ಲಿಯೂ ಇದೇ ವಾತಾವರಣ ಕಂಡುಬಂತು. ಗದ್ದಲ ಜಾಸ್ತಿಯಾದ್ದರಿಂದ ಕೊನೆಗೆ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಲ್ಪಟ್ಟಿತು.
Advertisement
The fear of @INCIndia is now visibly evident in Modi govt. Barricading the AICC headquarters and residence of Congress President Smt Sonia Gandhi & Shri @RahulGandhi BJP is just confirming what we have said all along
"BJP is a dictatorial regime & is destined to fall like one." pic.twitter.com/KsuxJLNYvK
— Leader of Opposition, Rajya Sabha (@LoPIndia) August 3, 2022
Advertisement
ಸಂಸತ್ ಆವರಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಡಿ ಉಪಯೋಗಿಸಿಕೊಂಡು ವಿಪಕ್ಷಗಳ ಧ್ನಿವಯನ್ನು ಅಡಗಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ನ್ಯಾಷನಲ್ ಹೆರಾಲ್ಡ್ ತನಿಖೆಯೇ ಬೆದರಿಕೆ ತಂತ್ರ. ಈ ಮೂಲಕ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಮೋದಿ, ಶಾ ಭಾವಿಸಿದ್ದಾರೆ. ಆದ್ರೆ ಅವರಿಗೆ ನಾವು ಭಯಪಡುವ ಪ್ರಶ್ನೆಯೇ ಇಲ್ಲ. ಸತ್ಯವನ್ನು ಬ್ಯಾರಿಕೇಡ್‍ಗಳ ಮೂಲಕ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು. ಕೇಂದ್ರ ಸಚಿವ ಪಿಯುಷ್ ಗೋಯೆಲ್, ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
Advertisement
ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭವನ್ ಚಲೋ ಹಮ್ಮಿಕೊಂಡಿದ್ದು, ಭಾರೀ ಹೈಡ್ರಾಮಾ ನಡೆಯುವ ಸಂಭವ ಇದೆ.