ನವದೆಹಲಿ/ ಬೆಂಗಳೂರು: 22 ವರ್ಷಗಳ ಬಳಿಕ ನಡೆಯುತ್ತಿರುವ ಎಐಸಿಸಿ(AICC) ಅಧ್ಯಕ್ಷೀಯ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಸೋಮವಾರ ಮತದಾನ ನಿಗದಿ ಆಗಿದ್ದು ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮತ್ತು ಶಶಿ ತರೂರ್(Shashi Tharoor) ಕಣದಲ್ಲಿದ್ದಾರೆ.
ನೂತನ ಅಧ್ಯಕ್ಷರ ಆಯ್ಕೆಗೆ 9,100 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕರ್ನಾಟಕದಲ್ಲಿ 494 ಮಂದಿ ಮತದಾರರಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ(Bharat Jodo Yatra) ಪಾದಯಾತ್ರೆಯಲ್ಲಿರುವ ಕಾರಣ ಬಳ್ಳಾರಿಯ ಸಂಗನಕಲ್ಲಿನಲ್ಲಿ ಎಲೆಕ್ಷನ್ ಬೂತ್ ಸ್ಥಾಪಿಸಲಾಗಿದೆ.
Advertisement
My appeal to delegates on the eve for voting in the @incIndia presidential election:#ThinkTomorrowThinkTharoor pic.twitter.com/Bf2lB7KX92
— Shashi Tharoor (@ShashiTharoor) October 16, 2022
Advertisement
ಕೆಪಿಸಿಸಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಲವು ಖರ್ಗೆ ಅವರತ್ತಲೇ ಇರುವ ಕಾರಣ ಎರಡನೇ ಬಾರಿಗೆ ಕನ್ನಡಿಗರೊಬ್ಬರು ಎಐಸಿಸಿ ಗಾದಿಗೆ ಏರುವುದು ಬಹುತೇಕ ನಿಶ್ಚಿತ. ಅಕ್ಟೋಬರ್ 19ಕ್ಕೆ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?: ಕಾಂಗ್ರೆಸ್
Advertisement
Held a detailed discussion on key priority areas with my fellow party leaders and PCC delegates from Tamil Nadu and Puducherry in Chennai ahead of the Congress' Presidential election. pic.twitter.com/G6XfZ0l6le
— Mallikarjun Kharge (@kharge) October 15, 2022
Advertisement
ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಕರ್ನಾಟಕದಿಂದಲೇ ನನ್ನ ರಾಜಕಾರಣ ಪ್ರಾರಂಭವಾಗಿದೆ. ಶಾಸಕನಾಗಿ, ಮಂತ್ರಿಯಾಗಿ, ಸಿಎಲ್‌ಪಿ ಲೀಡರ್ ಆಗಿ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಕೆಳಮಟ್ಟದ ಕಾರ್ಯಕರ್ತನಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಶಶಿ ತರೂರ್ ಮಾತಾಡಿ, ನಾನು ಗೆದ್ದರೆ ಹೈಕಮಾಂಡ್ ಸಿಸ್ಟಂ ಇಲ್ಲದಂತೆ ಮಾಡುತ್ತೇನೆ. ಯಾರು ಗೆದ್ದರೂ ಸಂತೋಷ ಎಂದಿದ್ದಾರೆ. ಶಶಿ ತರೂರ್‌ಗೆ ಕಾರ್ತಿ ಚಿದಂಬರಂ ಬೆಂಬಲ ಘೋಷಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಭಾರತ್ ಜೋಡೋ ಯಾತ್ರೆ ನಡೆಯುತ್ತಿಲ್ಲ.