ಕಲಬುರಗಿ: ತಮ್ಮ ಅಭ್ಯರ್ಥಿಗಳ ಮತಯಾಚನೆ ಮಾಡುತ್ತಿರುವ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿಗಳನ್ನು ಮುಂದುವರಿಸಿದ್ದಾರೆ. ಹಾಗೆಯೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್‍ಗೆ ನಾಚಿಕೆಯಾಗಬೇಕು. ಯಾಕಂದ್ರೆ ಇದೀಗ ಅವರ ಮಾತಿಗೆ ಚುನಾವಣಾ ಆಯೋಗ ಮೂರು ದಿನ ಮಾತನಾಡದಂತೆ ಬ್ರೇಕ್ ಹಾಕಿದೆ ಯಾಕಂದ್ರೆ ಬಾಯಿ ತೆರೆದ್ರೆ ಹೊಲಸು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದ್ರು.
Advertisement
Advertisement
ನಾನು ಒಂದು ಬಾರಿ ಪಾರ್ಲಿಮೆಂಟ್ ನಲ್ಲಿ ಮಾತನಾಡುವಾಗ ಹೇಳಿದ್ದೆ, ಬಿಜೆಪಿಯವರು ಇಷ್ಟೆಲ್ಲಾ ಹೊಲಸು ಮಾತನಾಡುತ್ತಿದ್ದೀರಿ ಅಲ್ವ. ನಿಮ್ಮ ತಾಯಿ ನಿಮ್ಮ ನಾಲಗೆಯನ್ನು ಸ್ವಚ್ಛ ಮಾಡಲು ಮರೆತಿದ್ದಾರೆ ಅನಿಸುತ್ತಿದೆ. ಅದಕ್ಕೆ ಸರಿಯಾಗಿ ನಾಲಗೆ ತೊಳೆದುಕೊಂಡು ಬನ್ನಿ ಎಂದು ಹೇಳಿದ್ದೆ. ಅಷ್ಟು ಕೆಟ್ಟದಾಗಿ ಮಾತಾಡ್ತಾರೆ. ಗಾಂಧಿ, ಇಂದಿರಾಗಾಂಧಿ, ಸೋನಿಯಾ ಗಾಂಧಿ ಏನ್ ಎಂದು ಕೇಳುತ್ತಾರೆ. ಇವರೊಬ್ಬರೇ ಶ್ರೇಷ್ಠರಾ ಎಂದು ಪ್ರಶ್ನಿಸುವ ಮೂಲಕ ಗರಂ ಆದ್ರು.
Advertisement
ಖಾವಿ ಉಟ್ಟು ರಾಜಕೀಯ ಮಾಡುವ ಅವರಿಗೆ ನಾಚಿಕೆಯಾಗಬೇಕು. ಮುಖಮೇ ರಾಮ್ ಬಗಲ್ ಮೇ ಚೂರಿ ಹೈ. ಈ ರೀತಿಯ ಹೇಳಿಕೆಗಳಿಂದಲೇ ಚುನಾವಣಾ ಆಯೋಗ ನೀವು 3 ದಿನ ಮಾತನಾಡಬಾರದು ಎಂದು ನಿರ್ಬಂಧ ಹೇರಿದೆ ಎಂದು ವಾಗ್ದಾಳಿ ನಡೆಸಿದ್ರು.