ಬೀದರ್: ಇಡಿ ಹಾಗೂ ಐಟಿಯನ್ನು ನರೇಂದ್ರ ಮೋದಿ (Narendra Modi) ಹಾಗೂ ಅಮಿತ್ ಶಾ (Amit Shah) ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ನಗರದ ನೆಹರೂ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ನಾಯಕರಿಗೆ ಇಡಿ, ಐಟಿ ಹಾಗೂ ಮೋದಿ ಭಯವಿದೆ. ಕಾಂಗ್ರೆಸ್‍ನಿಂದ ಲಾಭ ತೆಗೆದುಕೊಂಡ ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುವುದಿಲ್ಲ. ಈ ಸಂವಿಧಾನವನ್ನು ಮೋದಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್‍ಗೆ ಸಹಕಾರ ನೀಡಲೇಬೇಕು ಎಂದಿದ್ದಾರೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಗೆ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್
Advertisement
Advertisement
ಎಲ್ಲರಿಗೂ ಉಚಿತವಾಗಿ ನಾವು ಪಡಿತರ ಅಕ್ಕಿಯನ್ನು ಕೊಡುತ್ತಿದ್ದೇವೆ. ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಮೋದಿ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ರಾಮಮಂದಿರದಲ್ಲಿ ರಾಜಕೀಯ ಏಕೆ ಬಂತು? ಮೋದಿ ಜನ, ಧರ್ಮ, ಜಾತಿಯನ್ನ ಬೇರೆ ಬೇರೆ ಮಾಡಲು ನೋಡುತ್ತಾರೆ. ಈ ಬಾರಿ ಮೋದಿಯವರನ್ನು ಅಧಿಕಾರದಿಂದ ಹೊರಗೆ ಕಳಿಸಿ, ಮುಂದಿನ ಪೀಳಿಗೆಯನ್ನು ರಕ್ಷಣೆ ಮಾಡಬೇಕಿದೆ. ಎಲ್ಲಾ ಬಡವರಿಗೆ ಹೋಗುತ್ತವೆ ಎಂದು ಮೋದಿ ಎಲ್ಲಾ ನೇಮಕಾತಿಗಳನ್ನು ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಮೀಡಿಯಾಗಳ ಮಾಲೀಕರು ಶ್ರೀಮಂತರ ಕೈಯಲ್ಲಿದ್ದು, ಹಲವು ಟಿವಿಗಳು ಒಬ್ಬ ಮಾಲೀಕರ ಕೈಯಲ್ಲಿವೆ ಎಂದು ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸಿ, ಕೇಂದ್ರದ ಅನುದಾನ ಬರುತ್ತದೆ: ಕಾಂಗ್ರೆಸ್‌ಗೆ ಬೊಮ್ಮಾಯಿ ಠಕ್ಕರ್