ಕಲಬುರಗಿ: ಈಶ್ವರಪ್ಪ ಜನತೆಗೆ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಎಂದು ಕಿಡಿಕಾರಿದರು.
ಕಾಂಗ್ರೆಸ್ (Congress) ಪ್ರಣಾಳಿಕೆಯನ್ನು ಸುಟ್ಟು ಹಾಕಿರುವ ಈಶ್ವರಪ್ಪ (KS Eshwarappa) ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿರುವುದು ಸರಿಯಲ್ಲ. ಯಾವುದೇ ಪ್ರಣಾಳಿಕೆಯಾದರೂ ಹೇಗೆ ಇದ್ದರೂ, ಸುಡುವುದು ಸರಿಯಲ್ಲ. ಜನರಿಗೆ ಕೊಟ್ಟ ಗ್ಯಾರೆಂಟಿ ಯೋಜನೆಗಳನ್ನು ಸುಟ್ಟು ಹಾಕಿದ್ದಾರೆ. ಪ್ರಣಾಳಿಕೆಯನ್ನು ಸುಟ್ಟು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಈಶ್ವರಪ್ಪ ಅವರು ಜನರಿಗೆ ಪ್ರಚೋದನೆ ಮಾಡಿದ ಹಾಗೆ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಲಿಬರ್ಟಿ, ಈಕ್ವಾಲಿಟಿ, ಟಾಲರೆನ್ಸ್ ಪ್ರಮುಖವಾಗಿದೆ. ಅದಕ್ಕೆ ತಕ್ಕ ಉತ್ತರ ನಮ್ಮ ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಣಾಳಿಕೆ ಕಮಿಟಿ ಪರಮೇಶ್ವರ ಟೀಮ್ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳೋ ದಾರುಣ ಪರಿಸ್ಥಿತಿ ನನಗಾಗಲಿ, ತಂದೆಗಾಗಲಿ ಬಂದಿಲ್ಲ: ವಿಜಯೇಂದ್ರ
Advertisement
Advertisement
ಕಾಂಗ್ರೆಸ್ ಹಿಂದು ವಿರೋಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವಿಚಾರ ಇರಬಹುದು, ಅವರ ಹಿಂದುತ್ವ ಬೇರೆಯಾಗಿದೆ. ನಾನು ಹಿಂದೂ, ನೀವು ಹಿಂದೂ ಇದ್ದೀರಿ, ನಿಮಗೆ ಇರುವ ಸ್ವಾತಂತ್ರ್ಯ ನನಗೆ ಇಲ್ಲ. ಈ ವಿಚಾರವಾಗಿ ಡಿಬೆಟ್ ಮಾಡಿದ್ರೆ ಆಗ ಅವರಿಗೆ ಉತ್ತರ ಕೋಡೊಣ ಎಂದರು. ಇದನ್ನೂ ಓದಿ: ಅಮಿತ್ ಶಾ ತಮ್ಮ ಮಗನನ್ನು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಲಿ – ಕಾಂಗ್ರೆಸ್ ಕಿಡಿ