ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಿತ್ತಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಅವರಿಗೆ ದೀಪ ಬೇಕಿತ್ತು. ಪ್ರಧಾನಿಯಾಗಿ ಮೂರು ವರ್ಷ ದೀಪ ಇಟ್ಟುಕೊಂಡೇ ಓಡಾಡಿದ್ದರು. ನಾನು ಕೆಂಪು ದೀಪ ಬೇಕು ಎಂದು ಸಮರ್ಥನೆ ಮಾಡುತ್ತಿಲ್ಲ. ದೀಪ ತಗೆದಿದ್ದು ಒಳ್ಳೆಯ ಕ್ರಮ. ಆದ್ರೆ ಕೇವಲ ಗಿಮಿಕ್‍ಗೋಸ್ಕರ ಮಾಡೋದು ಸರಿಯಲ್ಲ. ಮೋದಿ ಅವರು ತಮಗಿರುವ ಭದ್ರತೆಯನ್ನು ಕಡಿಮೆ ಮಾಡಲಿ ಎಂದು ಹೇಳಿದರು.
Advertisement
ದಿಗ್ವಿಜಯ್ ಪರ ಬ್ಯಾಟಿಂಗ್: ಇಡಿ ದೇಶದಲ್ಲಿ ಎಐಸಿಸಿ ಹೊಸ ಟೀಂ ಕೊಡುತ್ತಿದೆ. ಹಾಗೆ ರಾಜ್ಯಕ್ಕೂ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ಟೀಂ ನೇಮಕ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಒಳ್ಳೆಯ ಕೆಲಸ ಮಾಡಿದ್ದುಮ ಅವರಿಗೆ ಆಗದವರು ಟೀಕೆ ಮಾಡ್ತಾರೆ. ಹಾಗಾಗಿ ಕೆಲವರ ಆರೋಪದ ಕಾರಣದಿಂದಾಗಿ ಉಸ್ತುವಾರಿ ಬದಲಾವಣೆ ಆಗಿಲ್ಲ. ಚುನಾವಣೆಯ ದೃಷ್ಟಿಯಿಂದ ಹೊಸದಾಗಿ ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದಾರೆ ಎಂದು ತಿಳಿಸಿದರು.
Advertisement
ದಿಗ್ವಿಜಯ್ ಸಿಂಗ್ ಉತ್ತಮ ಅನುಭವಿಯಾಗಿದ್ದು ಪಾರ್ಲಿಮೆಂಟ್‍ನಲ್ಲೂ ಉತ್ತಮ ಕೆಲಸ ನಿರ್ವಹಿಸಿದ್ದರು. ಮಧ್ಯಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಬೇರೆಯವರು ಆರೋಪ ಮಾಡುತ್ತಾರೆಂದು ನಾನು ಆ ರೀತಿ ಮಾತನಾಡಲು ಸಾಧ್ಯವಿಲ್ಲ. ನಾನು 38 ವರ್ಷದಿಂದ ಅವರನ್ನು ನೋಡಿದ್ದೇನೆ. ಯಾವುದೋ ಒಂದು ಕಾರಣಕ್ಕೆ ಅವರ ಸೇವೆಯನ್ನು ಅಲ್ಲಗಳೆಯುವುದು ಸರಿಯಲ್ಲ. ಸೆಕ್ಯುಲರಿಸಂ ಬಗ್ಗೆ ಹೆಚ್ಚು ಚಿಂತನೆ ನಡೆಸಿದ ದಿಗ್ವಿಜಯ್ ಸಿಂಗ್ ಮೇಲಿನ ದೂರುಗಳು ಸತ್ಯಕ್ಕೆ ದೂರವಾದುವು ಎಂದರು.
Advertisement
ಪ್ರತಿಕ್ರಿಯಿಸಲ್ಲ: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಸದ್ಯಕ್ಕೆ ಊಹಾಪೋಹ. ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಹೈಕಮಾಂಡ್ ಇನ್ನೂ ಈ ಬಗ್ಗೆ ನನಗೆ ಕೇಳಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು ಆ ತೀರ್ಮಾನವನ್ನು ನಾನು ಪ್ರಶ್ನಿಸಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
ಬಿಜೆಪಿ ಗೊಂದಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ಮುಖಂಡರಿಗೆ ಪೂರ್ಣ ಸ್ವತಂತ್ರವಿದ್ದು, ಪಕ್ಷ ಒಡೆಯಬೇಕೋ? ಉಳಿಸಬೇಕು ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದರು.
ಇದನ್ನೂ ಓದಿ: ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್
ಇದನ್ನೂ ಓದಿ: ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ