ಕಲಬುರಗಿ: ಆಯಾ ರಾಮಾ.. ಗಯಾ ರಾಮಾ ಅಂತಾ ಪಕ್ಷ ಬಿಟ್ಟು ಹೋದ್ರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸೇರ್ಪಡೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಕಲಬುರಗಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ (Jagadeesh Shettar) ಯಾವ ಸನ್ನಿವೇಶದಲ್ಲಿ ಸೇರಿದ್ರು ಗೊತ್ತಿಲ್ಲ. ಅವರಿಗೆ ಬಿಜೆಪಿಯವರು ಕೈಕೊಟ್ಟರು, ಆಗ ನಾವು ಟಿಕೆಟ್ ಕೊಟ್ಟು ನಂತರ ಶಾಸಕ ಸಹ ಮಾಡಿದ್ವಿ. 6 ತಿಂಗಳ ಹಿಂದೆ ಶೆಟ್ಟರ್ ಅವರಿಗೆ ಏನಾಗಿತ್ತು?. ಯಾಕೆ ಪಕ್ಷ ಬಿಟ್ರಿ ಅಂತಾ ಶೆಟ್ಟರ್ ಅವರು ಉತ್ತರ ಕೊಡಲಿ ಎಂದು ಹೇಳಿದರು.
6 ತಿಂಗಳಲ್ಲಿ ನಾವು ಏನ್ ಇಷ್ಟು ಅನ್ಯಾಯ ಮಾಡಿದ್ವಿ?. ರಾಮಮಂದಿರ ಕುರಿತು 125 ವರ್ಷ ಪಾರ್ಟಿ ಸ್ಟ್ಯಾಂಡ್ ಒಂದೇ ಇದೆ. ನಮ್ಮ ಪಕ್ಷ ಯಾರ ಮೇಲೂ ನಿಂತಿಲ್ಲ. ಆಯಾ ರಾಮ ಗಯಾ ರಾಮ ಅಂತಾ ಬಿಟ್ಟು ಬಿಡ್ತೀವಿ. ಅವರು ಪಕ್ಷ ಬಿಡಲು ಕಾರಣ ತಿಳಿಸಲಿ ಎಂದು ತಿಳಿಸಿದರು. ಇದನ್ನೂ ಓದಿ: ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದಕ್ಕೆ ಡಿಕೆಶಿ, ಸಿಎಂಗೆ ಧನ್ಯವಾದ ಸಲ್ಲಿಸಿದ್ರು ಶೆಟ್ಟರ್
ಘರ ವಾಪ್ಸಿ ಬಗ್ಗೆ ತಾನೇ ನಮ್ಮ ಮನೆ ಗಟ್ಟಿಯಿದೆ. ಮ್ಯಾಚ್ ಆಡಲು ನಾವು ಅಧಿಕೃತ ಎಂಟ್ರಿನೇ ಕೊಟ್ಟಿಲ್ಲ. ನಾವು ಇನ್ನೂ ಪ್ಲೇಯಿಂಗ್ 11 ಲಿಸ್ಟ್ ಅನೌನ್ಸ್ ಮಾಡಿಲ್ಲ. ಪ್ಲೇಯಿಂಗ್ 11 ರಲ್ಲಿ ಇರಲ್ಲ ಅಂತಾ ಅವರು ಅಂದುಕೊಂಡು ಹೋಗಿದ್ದಾರೆ. ಟಾಸ್ ಆಗಲಿ ನಂತರ ಎಲ್ಲಾ ಗೊತ್ತಾಗಲಿದೆ. ಬಿಜೆಪಿಯಲ್ಲಿ ಸದ್ಯ ನಾಯಕರ ಕೊರತೆಯಿದೆ. ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ. ಹೀಗಾಗಿ ಶೆಟ್ಟರ್ ಅವರನ್ನು ಬಿಜೆಪಿ ಕರೆಸಿಕೊಂಡಿದೆ ಎಂದರು.