– ಮೈತ್ರಿ ಪರ ಖರ್ಗೆ ಒಲವು
ಕಲಬುರಗಿ: ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ. ಆದರೆ ಆಯೋಗವನ್ನು ತನ್ನ ಅಧಿಕಾರದಿಂದ ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ, ತನ್ನ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನ ಘೋಷಣೆ ಮಾಡಿಸಿಕೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.
Advertisement
ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಕರ್ನಾಟಕದ ಚುನಾವಣೆ ದಿನಾಂಕಗಳನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳುತ್ತಿದೆ. ಮೋದಿ ಅಮೆರಿಕಗೆ ತೆರಳುವ ಮುನ್ನ ನಾಸಿಕ್‍ಗೆ ಭೇಟಿ ನೀಡಿ ಭಾಷಣ ಮಾಡಿದ್ದೆ ಇದಕ್ಕೆ ಉದಾಹರಣೆಯಾಗಿದೆ. ಈ ಮೊದಲು 45 ದಿನ ಅಂತರ ಇಟ್ಟು ಚುನಾವಣೆ ಘೋಷಣೆ ಮಾಡಲಾಗುತಿತ್ತು. ಆದರೆ ಈ ಬಾರಿ ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಕೇವಲ 21 ದಿನಗಳನ್ನು ನೀಡಲಾಗಿದೆ ಎಂದರು.
Advertisement
Advertisement
ಬಿಜೆಪಿ ಯಾವುದೇ ತಂತ್ರ ಮಾಡಿದರು ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಈಗಾಗಲೇ ಮೊದಲ ಪಟ್ಟಿ ಸಿದ್ಧವಾಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 2ನೇ ಪಟ್ಟಿಯೂ ಬಹುಬೇಗ ಸಿದ್ಧಪಡಿಸಿಕೊಳ್ಳುತ್ತೇವೆ ಎಂದರು.
Advertisement
ಚುನಾವಣೆ ಘೋಷಣೆ ಮುನ್ನ ದಿನ ದೊಡ್ಡ ದೊಡ್ಡ ಕಂಪೆನಿಗಳ ಜಿ.ಎಸ್.ಟಿ ಕಡಿತ ಘೋಷಿಸಿದ್ದಾರೆ. ಮೋದಿ ಅಮೆರಿಕದಲ್ಲಿ ಹೋಗಿ ಟ್ರಂಪ್ ಜೊತೆ ನ್ಯೂಸ್ ಕ್ರೀಯೆಟ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಟ್ರಂಪ್ ಮತ್ತು ಮೋದಿ ಇಬ್ಬರಿಗೂ ಚುನಾವಣೆಯ ಲಾಭ ಪಡೆಯುವ ಉದ್ದೇಶ ಬಿಟ್ಟರೆ ಬೇರೆ ಯಾವುದೇ ಉದ್ದೇಶವಿಲ್ಲ. ಟ್ರಂಪ್ ಬಂದ ಮೇಲೆಯೇ ಭಾರತೀಯರ ಉದ್ಯೋಗ ಕಡಿತವಾಗಿದೆ. ಟ್ರಂಪ್ ನೀತಿ ಭಾರತಕ್ಕೆ ಮಾರಕವಾಗಿದ್ದರೂ ಕೂಡ ಅಂಥವರ ಜೊತೆ ಮೋದಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇಷ್ಟು ಬೇಗ ಚುನಾವಣೆ ಬರುತ್ತದೆ ಎಂದು ನಾವು ಅಂದು ಕೊಂಡಿರಲಿಲ್ಲ. ದೇಶದಲ್ಲಿ ಜಾತ್ಯಾತೀತ ತತ್ವ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ, ಮೈತ್ರಿಯೊಂದಿಗೆ ಸ್ಪರ್ಧಿಸುವುದು ಉತ್ತಮ. ಇಲ್ಲವಾದರೆ ಕನಿಷ್ಠ ಪಕ್ಷ ಫ್ರೆಂಡ್ಲಿ ಫೈಟ್ ಆದ್ರೂ ಮಾಡಬೇಕು. ವಿರೋಧಿಗಳ ಜೊತೆಗೂ ಉತ್ತಮ ಸಂಬಂಧ ಉಳಿಸಿಕೊಳ್ಳುವುದು ಉತ್ತಮ ಎಂಬುವುದು ನನ್ನ ಅಭಿಪ್ರಾಯ ಎಂದರು. ಆದರೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದರು.