ಬೀದರ್: ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದ್ದು, ಗುತ್ತಿಗೆದಾರ ಬಳಿ 40%, ಸ್ವಾಮಿಗಳ ಬಳಿ 30% ಕಮಿಷನ್ ತೆಗೆದುಕೊಳ್ಳುವವರು ಅವರೇ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
Advertisement
ಈ ಕುರಿತು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಬೇಕು ಅಂದರೆ 2,500 ಕೋಟಿ ರೂ. ಕೊಡಬೇಕಂತೆ. ಅವರ ಪಕ್ಷದ ಶಾಸಕ ಯತ್ನಾಳ್ ಹೇಳುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಕೋವಿಡ್ ಸಾವಿನ ಲೆಕ್ಕ ನೀಡುವುದರಲ್ಲಿ ಕೇಂದ್ರ ಸರ್ಕಾರ ಎಡವಿದ್ದು, 4.75 ಲಕ್ಷ ಜನ ಮಾತ್ರ ಸಾವನಪ್ಪಿದ್ದಾರೆಂದು ಕೇಂದ್ರ ಸರ್ಕಾರ ಲೆಕ್ಕ ಕೊಟ್ಟಿದೆ ಎಂದರು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್
Advertisement
Advertisement
ನಾನು ಅಂದೇ ದೇಶದಲ್ಲಿ 50 ಲಕ್ಷ ಜನ ಕೊವೀಡ್‍ನಿಂದ ಮೃತಪಟ್ಟಿದ್ದಾರೆಂದು ರಾಜ್ಯಸಭೆಯಲ್ಲಿ ಹೇಳಿದ್ದೆ. ನನ್ನ ಹೇಳಿಕೆಗೆ ಅಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ಆದರೆ ಭಾರತದಲ್ಲಿ 47 ಲಕ್ಷ ಜನ ಸಾವನ್ನಪ್ಪಿದ್ದಾರೆಂದು ಇಂದು ಸ್ವತಃ ಡಬ್ಲ್ಯೂಹೆಚ್‍ಓ ಹೇಳುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದರು. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್