ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ: ಖರ್ಗೆ ಭವಿಷ್ಯ

Public TV
1 Min Read
MALLIKARJUN KHARGE 3

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ. ಈ ಮೂಲಕ ಸೋಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭವಿಷ್ಯ ನುಡಿದಿದ್ದಾರೆ.

ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ (Narendra Modi) 400 ಸೀಟುಗಳ ಯೋಜನೆ ಸಾಕಾರಗೊಳ್ಳುವುದಿಲ್ಲ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಬಿಜೆಪಿ ಹೇಳಿಕೊಂಡರೂ 100 ಸ್ಥಾನಗಳನ್ನು ದಾಟಲು ಸಾಧ್ಯವಾಗಲ್ಲ. ಈ ಬಾರಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ (Congress) ಅಧಿಕಾರಾವಧಿಯಲ್ಲಿ ಅಮೇಥಿಯಲ್ಲಿ ಕೋಟ್ಯಂತರ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ ಅವುಗಳಲ್ಲಿ ಹೆಚ್ಚಿನವು ಬಾಕಿ ಉಳಿದಿವೆ. ಯೋಜನೆಗಳು ಇನ್ನೂ ಏಕೆ ಅಪೂರ್ಣವಾಗಿವೆ ಎಂದು ನಾನು ಕೇಳಲು ಬಯಸುತ್ತೇನೆ. ಅವರು ಅಮೇಥಿ ಮತ್ತು ರಾಯಬರೇಲಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಯಾಕೆಂದರೆ ಅವರು ಯೋಜನೆಗಳನ್ನು ಮುಗಿಸಿದ್ದಾರೆ ಎಂದರು.

ಇದು ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi) ಅವರು ಶ್ರಮಿಸಿದ ನೆಲ. ಅಮೇಥಿಯ ಜನರು ಗಾಂಧಿ ಕುಟುಂಬದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಖರ್ಗೆ ಹೇಳಿದರು. ಇದನ್ನೂ ಓದಿ: ಶಾಲೆಯಲ್ಲಿ ಧರ್ಮ ಅವಹೇಳನ ಆರೋಪ- ಮೀಡಿಯಾಗೆ ಹೇಳಿಕೆ ಕೊಟ್ಟ ಶಿಕ್ಷಕಿ ವಜಾ, ವಿದೇಶದಿಂದ ಬೆದರಿಕೆ

Share This Article