ಧಾರವಾಡ: ನಾನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳಷ್ಟು ಸಂತೋಷವಾಗಿ ಬಂದಿದ್ದೇನೆ. ಅವರಿಂದ ನಾನು ಯಾವುದೇ ರಾಜಕೀಯವಾಗಿ ಲಾಭವನ್ನು ನಿರೀಕ್ಷೆ ಮಾಡುತ್ತಿಲ್ಲ. ನಿತಿನ್ ಗಡ್ಕರಿ ಅಭಿವೃದ್ಧಿ ಪರ ಇರುವ ವ್ಯಕ್ತಿ ಎಂದು ಅವರನ್ನು ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಡಿ ಹೊಗಳಿದ್ದಾರೆ.
ಹೊಸ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತಿನ್ ಗಡ್ಕರಿ ಕರ್ನಾಟಕದಿಂದ ಯಾವುದೇ ಮನವಿಯನ್ನು ನೀಡಿದರು ಶೀಘ್ರವಾಗಿ ಜಾರಿ ಮಾಡತ್ತಾರೆ. ಅವರ ಕಾರ್ಯ ವೈಖರಿ ಮೆಚ್ಚಿ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಅವರು ಯಾವಾಗಲೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಬೇರೆಯವರು ಬರೀ ರಾಜಕೀಯ ಮಾಡುತ್ತಾರೆ ಎಂದರು. ಇದನ್ನೂ ಓದಿ: ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ: ನಿತಿನ್ ಗಡ್ಕರಿ ಭರವಸೆ
Advertisement
Advertisement
ಅನೇಕ ಮಂತ್ರಿಗಳು ಅವರ ಕ್ಷೇತ್ರಕ್ಕೆ ತೆರಳಿದರು ಗೌರವ ಸೀಗುತ್ತಿಲ್ಲ. ಗಡ್ಕರಿ ಅವರು ಬಹಳಷ್ಟು ಯೋಜನೆ ಹಾಕಿಕೊಂಡು ಕೆಲಸ ಮಾಡುತ್ತಿದ್ದರು ಆದರೆ ಇತ್ತಿಚೆಗೆ ಅವರ ಯೋಜನೆಯಲ್ಲಿ ಯಾಕೋ ತಡವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್
Advertisement
Advertisement
ನಿತಿನ್ ಗಡ್ಕರಿ ಅವರಿಗೆ ಹಣ ಎಲ್ಲಿಂದ ಬರುತ್ತೆ ಹೇಗೆ ಬರುತ್ತೆ ಅದನ್ನು ಹೇಗೆ ಉಪಯೋಗ ಮಾಡಬೇಕು ಅಂತ ಬಹಳಷ್ಟು ಚೆನ್ನಾಗಿ ಗೊತ್ತು. ಅವರಿಗೆ ನಾನು ದೆಹಲಿಯಲ್ಲಿದ್ದಾಗ ಕೆಲವು ಪ್ರಸ್ತಾವನೆಗಳನ್ನಿಟ್ಟಿದೆ. ಅವರು ನಮ್ಮ ಪಕ್ಷ ಕಚೇರಿಗೆ ಬಂದು ನನ್ನ ಪತ್ರಗಳು ತೆಗೆದುಕೊಂಡು ಹೋಗಿ ಎಲ್ಲಾ ಬೇಡಿಕೆಗೆ ಸ್ಪಂದನೆ ಮಾಡಿದರು. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದರು.