ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ

Public TV
3 Min Read
Mallikarjun Kharge

ಅಹಮದಾಬಾದ್: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra Assembly Election) ಬಿಜೆಪಿ ಮೋಸದ ಮೂಲಕ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಇವಿಎಂ (EVM machine) ಬಳಕೆಯ ಮೂಲಕ ಪ್ರಜಾಪ್ರಭುತ್ವವನ್ನು ಹಾಳು ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಗಂಭೀರ ಆರೋಪ ಮಾಡಿದ್ದಾರೆ.

Mallikarjun Kharge 1

ಗುಜರಾತ್‌ನ (Gujarat) ಅಹಮದಾಬಾದ್‌ನ (Ahmedabad) ಸಾಬರಮತಿ ನದಿ ತೀರದಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ. ನಾವು ಎಲ್ಲೆಡೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ರಾಹುಲ್ ಗಾಂಧಿ ಈ ಬಗ್ಗೆ ತೀವ್ರವಾಗಿ ಧ್ವನಿ ಎತ್ತಿದ್ದಾರೆ. ಒಟ್ಟಾರೆಯಾಗಿ ಮಹಾರಾಷ್ಟ್ರ ಚುನಾವಣೆ ಒಂದು ಮೋಸವಾಗಿತ್ತು ಎಂದರು.ಇದನ್ನೂ ಓದಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದಕ್ಕೆ ರಾಯರೆಡ್ಡಿ ಹೇಳಿಕೆಯೇ ಸಾಕ್ಷಿ: ನಿಖಿಲ್

ಹರಿಯಾಣದಲ್ಲೂ ಇದೇ ರೀತಿಯಾಗಿ ನಡೆದಿದೆ. ಇಂತಹ ಮೋಸ ಈ ಹಿಂದೆ ಎಂದೂ ನಡೆದಿರಲಿಲ್ಲ. ಇದು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಉದ್ದೇಶದಿಂದ ಮಾಡಲಾಗಿದೆ. ನಾವು ಇದನ್ನು ಕಂಡುಹಿಡಿಯುತ್ತೇವೆ. ಕಳ್ಳ ಒಂದು ದಿನ ಸಿಕ್ಕಿಬೀಳುತ್ತಾನೆ. ನಮ್ಮ ವಕೀಲರು ಮತ್ತು ನಾಯಕರು ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Mallikarjun Kharge 2

ವಿಶ್ವದಾದ್ಯಂತ ಇವಿಎಂಗಳಿಂದ ಮತ ಪತ್ರಗಳತ್ತ ಮರಳುತ್ತಿವೆ. ಆದರೆ ನಾವು ಇನ್ನೂ ಇವಿಎಂಗಳನ್ನೇ ಬಳಸುತ್ತಿದ್ದೇವೆ. ಇದು ಸಂಪೂರ್ಣ ಮೋಸ. ಅವರು ನಮ್ಮನ್ನು ಸಾಬೀತುಪಡಿಸುವಂತೆ ಕೇಳುತ್ತಾರೆ. ಆದರೆ ಅವರು ರೂಪಿಸಿರುವ ತಂತ್ರಗಳು ಆಡಳಿತ ಪಕ್ಷಕ್ಕೆ ಲಾಭವನ್ನು ತಂದುಕೊಡುತ್ತವೆ ಮತ್ತು ಪ್ರತಿಪಕ್ಷಕ್ಕೆ ಅನಾನುಕೂಲ ಮಾಡುತ್ತವೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಯುವಜನರು ಎದ್ದು ನಮಗೆ ಮತಪತ್ರ ಬೇಕು ಎಂದು ಒತ್ತಾಯಿಸುವ ಸಮಯ ಬಂದಿದೆ ಎಂದು ಘೋಷಿಸಿದರು.

ಕಳೆದ 11 ವರ್ಷಗಳಿಂದ ಆಡಳಿತ ಪಕ್ಷ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಸಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಇವುಗಳನ್ನು ರಕ್ಷಿಸಲು ನಾವು ಹೋರಾಡಬೇಕಾಗಿದೆ. ಸರ್ಕಾರವು ಸಂಸತ್ತಿನ ಬಜೆಟ್ ಅಧಿವೇಶನವನ್ನು ತನ್ನ ಇಚ್ಛೆಯಂತೆ ನಡೆಸುತ್ತಿದೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದು ಹೇಳಿದರು.ಇದನ್ನೂ ಓದಿ: ವೃತ್ತಿ ಜೀವನದ ಕೊನೆಯ ದಿನ ಲೋಕಾಯುಕ್ತ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಮುಖ್ಯಸ್ಥ!

Mallikarjun Kharge Sonia gandhi

ಮೋದಿ ಸರ್ಕಾರವು ಸಾರ್ವಜನಿಕ ಸಂಪನ್ಮೂಲಗಳನ್ನು ಕೆಲವೇ ಕೆಲವು ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ. SC, ST ಮತ್ತು OBC ಮೀಸಲಾತಿಯನ್ನು ಖಾಸಗೀಕರಣದ ಮೂಲಕ ನಾಶಪಡಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ, ಮೋದಿ ಸರ್ಕಾರ ಇಡೀ ದೇಶವನ್ನು ಮಾರಿ ಹೋಗುತ್ತದೆ. ಬಿಜೆಪಿ-ಆರ್‌ಎಸ್‌ಎಸ್ 500 ವರ್ಷಗಳ ಹಳೆಯ ವಿಷಯಗಳನ್ನು ಎತ್ತಿ ಜನರಲ್ಲಿ ಧಾರ್ಮಿಕ ಒಡಕು ಮೂಡಿಸುತ್ತಿದೆ ಎಂದು ಟೀಕಿಸಿದ ಅವರು, ಜಾತಿಗಣತಿಗೆ ಆಗ್ರಹಿಸಿದರು ಮತ್ತು ಪ್ರಧಾನಿ ಮೋದಿ (PM Modi) ಒಬಿಸಿ ಸ್ಥಾನಮಾನವನ್ನು ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

Mallikarjun Kharge rahul gandhi

ಕಾಂಗ್ರೆಸ್ (Congress) ಪಕ್ಷದೊಳಗಿನ ಕಾರ್ಯಕ್ಷಮತೆ ಕುಂಠಿತರಿಗೆ ಎಚ್ಚರಿಕೆ ನೀಡಿದ ಖರ್ಗೆ, ಪಕ್ಷಕ್ಕೆ ಸಹಾಯ ಮಾಡದವರು ವಿಶ್ರಾಂತಿ ಪಡೆಯಬೇಕು, ಜವಾಬ್ದಾರಿಗಳನ್ನು ನಿಭಾಯಿಸದವರು ನಿವೃತ್ತರಾಗಬೇಕು ಎಂದು ತಾಕೀತು ಮಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವುದಾಗಿ ಘೋಷಿಸಿದ ಅವರು, ಎಐಸಿಸಿ ಮಾರ್ಗಸೂಚಿಗಳ ಪ್ರಕಾರ ಅವರನ್ನು ಆಯ್ಕೆ ಮಾಡಲಾಗುವುದು ಎಂದರು.ಇದನ್ನೂ ಓದಿ: ಇನ್ನು ಮುಂದೆ ಹೊಟೇಲ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ – ಫೇಸ್ ಐಡಿಯಲ್ಲೇ ದೃಢೀಕರಣ

Share This Article