ಕಲಬುರಗಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ನಾವು ಹೇಳಿದ್ರೆ ಜನ, ವಿರೋಧ ಪಕ್ಷದವರು ಹೇಳುತ್ತಾರೆ ಅಂತಾರೆ. ಕೆಲವು ಜನ ಇಂಥಹ ವಿಕೃತ ಮನಸ್ಸಿನವರಿದ್ದಾರೆ ಅವರು 100 ರೂ. ಆಗಲಿ ಪರವಾಗಿಲ್ಲ ಎನ್ನುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
Advertisement
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ 60 ರೂಪಾಯಿಗೆ ಪೆಟ್ರೋಲ್ ದೊರಕುತಿತ್ತು. ಇದೀಗ ನೂರರ ಗಡಿ ದಾಟಿದವರು ಕೇಂದ್ರ ಸರ್ಕಾರದ ವಿರುದ್ಧ ಯಾರು ಕೂಡ ಪ್ರಶ್ನೆ ಮಾಡುತ್ತಿಲ್ಲ. ಕಚ್ಚಾ ತೈಲ ಬೆಲೆ ಕಡಿಮೆ ಇದ್ದರು, ದೇಶದಲ್ಲಿ ಪೆಟ್ರೋಲ್ ಡೀಸೆಲ್ ನೂರರ ಗಡಿ ದಾಟಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಹೀಗಾಗಿ ಜನ ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ
Advertisement
Advertisement
ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಬಗ್ಗೆ ಮಾತನಾಡಿ, ಜೆಡಿಎಸ್ ಮೊದಲ ಬಾರಿಗೆ ಎರಡು ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ಕಾಂಗ್ರೆಸ್ ಗೆ ಹಿನ್ನಡೆ ಎಂದು ತಿಳಿದುಕೊಂಡರೆ ಅದು ತಪ್ಪು ಕಲ್ಪನೆ. ಜನ ಈಗ ಜಾಗೃತರಾಗಿದ್ದಾರೆ ಜಾತ್ಯಾತೀತ ತತ್ವದ ಮೇಲೆ ಕಾಂಗ್ರೆಸ್ ನಡೆಯುತ್ತದೆ. ಹಾಗಾಗಿ ಈ ಎರಡು ಕ್ಷೇತ್ರದಲ್ಲಿ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡುತ್ತಾರೆ. ಸಂವಿಧಾನ ಉಳಿಸಬೇಕು, ಜಾತ್ಯಾತೀತ ಇರಬೇಕು, ಬಿಜೆಪಿಗೆ ಪಾಠ ಕಲಿಸಬೇಕು ಎಂದು ಕೆಂಡಕಾರಿದರು. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್?
Advertisement
ಛತ್ತೀಸ್‍ಗಢದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿ, ಅಲ್ಲಿ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಪಂಜಾಬ್, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಸರಿಯಾಗಿದೆ. ದೇಶದಲ್ಲೇ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಎಲ್ಲರೂ ಅವರಿಗೆ ಸಹಕಾರ ನೀಡಬೇಕು ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಿರ್ಧಾರವೆ ಅಂತಿಮ ನಿರ್ಧಾರ ಎಂದರು. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್ ಬೆಲೆ