ಕಲಬುರಗಿ: ಬಿಜೆಪಿ (BJP) ವತಿಯಿಂದ ಕಲಬುರಗಿಯಲ್ಲಿ ಅ.30ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಓಬಿಸಿ ಸಮಾವೇಶ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ (Murugesh nirani) ಅವರು ಕಾರ್ಯಕ್ರಮ ನಡೆಯುವ ಸ್ಥಳದ ಪರಿಶೀಲನೆ ನಡೆಸಿದರು.
Advertisement
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಅವರ ತತ್ವ ಸಿದ್ಧಾಂತವೇ ಬೇರೆ ನಮ್ಮ ತತ್ವ ಸಿದ್ಧಾಂತವೇ ಬೇರೆ ಇದೆ. ಈ ಹಿಂದೆಯೂ ಅವರು ಹಲವು ಹುದ್ದೆಗಳು ಅಲಂಕರಿಸಿದ್ದರು. ಆದರೂ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ರಾಜ್ಯದ ಮೇಲೆ ಝೀರೋ ಎಫೆಕ್ಟ್ ಎಂದು ಹೇಳಿದರು. ಇದನ್ನೂ ಓದಿ: ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಲೇ ಸ್ಟೇರಿಂಗ್ ಸಮಿತಿ ರಚನೆ – ಕರ್ನಾಟಕದ ಮೂವರಿಗೆ ಸ್ಥಾನ
Advertisement
Advertisement
ಕಾಂಗ್ರೆಸ್‍ನ ಭಾರತ ಜೋಡೊ ಪಾದಯಾತ್ರೆ (Bharat Jodo Yatre) ಯಿಂದ ಯಾವ ಪ್ರಯೋಜನ ಆಗಿಲ್ಲ. ಕಾಂಗ್ರೆಸ್ (Congress) ನಡಿಗೆ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಆಗಿದೆ ಎಂದು ವ್ಯಂಗ್ಯವಾಡಿದರು. ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಸಿ, ನಮ್ಮ ಸರ್ಕಾರ ಎಲ್ಲಾ ವರ್ಗದ ಜನರ ಜೊತೆ ಇರುತ್ತದೆ. ನಮ್ಮ ಎದುರಿಗೆ ಈಗ ಮುಖ್ಯವಾಗಿರುವುದು ಸರ್ಕಾರದ ಸಾಧನೆ ಜನರಿಗೆ ತಲುಪಿಸುವುದು ಎಂದು ಹೇಳಿದರು.
Advertisement
ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ಜಾಗೃತಿ ವಿರಾಟ ಸಮಾವೇಶದ ಪೂರ್ವ ಸಿದ್ಧತೆಗಳ ನಡೆಯುತ್ತಿವೆ. 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಈ ಕಾರ್ಯಕ್ರಮವು, ಪಕ್ಷಕ್ಕೆ ತಳಮಟ್ಟದಿಂದ ಹೆಚ್ಚು ಬಲವನ್ನು ತುಂಬಲಿದೆ. ಪ್ರಜಾ ಕಲ್ಯಾಣವೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಇದನ್ನೂ ಓದಿ: ಒಂದು ಹೊಸ ಪ್ರೇರಣೆ ಖರ್ಗೆಯವರಿಂದ ಸಿಗಲಿದೆ: ಸೋನಿಯಾ ಗಾಂಧಿ
ಸಮಾವೇಶದಲ್ಲಿ ಮದ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.