– ನಿತೀಶ್ ಅಭ್ಯರ್ಥಿ ಆಗಿಸುವಂತೆ ಪೋಸ್ಟರ್
ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ವಿಪಕ್ಷಗಳ ಕೂಟ ಲೋಕಸಭಾ ಚುನಾವಣೆ ದೃಷ್ಟಿಯಿಂದ ತಂತ್ರ ಬದಲಿಸಲು ಮುಂದಾದಂತೆ ಕಾಣ್ತಿದೆ. ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಚಾರ್ಮ್ ವರ್ಕೌಟ್ ಆಗದ ಕಾರಣ ಪ್ರಧಾನಿ ಮೋದಿ (Narendra Modi) ವಿರುದ್ಧ ಐಎನ್‍ಡಿಐಎ (I.N.D.I.A) ಕೂಟ ದಲಿತಾಸ್ತ್ರ ಪ್ರಯೋಗಿಸುವ ಮುನ್ಸೂಚನೆ ನೀಡಿದೆ.
Advertisement
ಇಂದು ದೆಹಲಿಯಲ್ಲಿ ನಡೆದ ಐಎನ್‍ಡಿಐಎ ಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamta Banerjee) ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡೋದು ಬೆಟರ್ ಎಂಬ ಪ್ರಸ್ತಾಪವನ್ನು ಇಟ್ಟಿದ್ದಾರೆ. ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಖರ್ಗೆಯವರು ಮಾತ್ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ನೋಡೋಣ. ಈಗ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದ್ರು ಎನ್ನಲಾಗಿದೆ.
Advertisement
#WATCH | After the conclusion of the INDIA Alliance meeting, Congress president Mallikarjun Kharge says "Leaders of 28 political parties of the INDIA Alliance were present here in the fourth meeting held here today…" pic.twitter.com/SwdQpUtHzJ
— ANI (@ANI) December 19, 2023
Advertisement
ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಎಲ್ಲರೂ ಒಪ್ಪುತ್ತಾರೆ ಅನ್ನೋ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಕಾರಣ ಇಂದಿನ ಐಎನ್‍ಡಿಐಎ ಸಭೆಗೆ ಮುನ್ನವೇ, ಬಿಹಾರದ ಪಾಟ್ನಾ ಸೇರಿ ಹಲವೆಡೆ, ನಿತೀಶ್‍ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗಿದೆ. ನಿತೀಶ್‍ರನ್ನು ಅಭ್ಯರ್ಥಿಯಾಗಿ ಮಾಡಿದ್ರೆ ಮಾತ್ರ ಐಎನ್‍ಡಿಐಎ ಕೂಟ ಗೆಲ್ಲುತ್ತೆ ಎಂದು ಬರೆದ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
Advertisement
ಇಂದಿನ ಸಭೆಯಲ್ಲಿ ಸೀಟ್ ಶೇರಿಂಗ್ ಬಗ್ಗೆಯೂ ಚರ್ಚೆ ನಡೆದಿದೆ. ಕೊನೆಗೆ ಈ ಬಗ್ಗೆ ಚರ್ಚಿಸಲು ಡಿಸೆಂಬರ್ 31ರಂದು ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಿದೆ. ಜನವರಿ 2ನೇ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಪ್ಲಾನ್ ಮಾಡಿದೆ. ದೇಶದ ವಿವಿಧೆಡೆ ಇನ್ನೂ ಏಳೆಂಟು ಬಾರಿ ಸಭೆ ನಡೆಸಲು ತೀರ್ಮಾನಿಸಿದೆ. ಇಂದಿನ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲೂ, ನಿತೀಶ್, ಶರದ್‍ಪವಾರ್, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಅಖಿಲೇಶ್ ಯಾದವ್, ಮೆಹಾಬೂಬಾ ಮುಫ್ತಿ, ಸೀತಾರಂ ಯೆಚೂರಿ ಸೇರಿ 28 ಪಕ್ಷಗಳ 40ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದರು.