ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ದೆಹಲಿಯಲ್ಲಿ ಕರ್ನಾಟಕ ಚುನಾವಣೆ(Karnataka Election) ರಾಜ್ಯ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಮುಂದಿನ 75 ದಿನಗಳಲ್ಲಿ ಏನೇನು ಮಾಡಬೇಕು? ಸರ್ಕಾರದ ವಿರುದ್ಧ ಯಾವರೀತಿ ಹೋರಾಟ ನಡೆಸಬೇಕು ಎಂಬ ಬಗ್ಗೆ ರಣತಂತ್ರ ರೂಪಿಸಿದ್ದಾರೆ. ಪ್ರಮುಖವಾಗಿ ನೀರಾವರಿ ವಿಚಾರ, ಸರ್ಕಾರದ ವಿರುದ್ಧದ ಕಮೀಷನ್ ಆರೋಪ ಮುಂದಿಟ್ಟುಕೊಂಡು ಜನರ ಬಳಿ ಹೋಗಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ
Advertisement
Advertisement
ಈ ಮಧ್ಯೆ ಸಿಎಂ ಪದವಿಗೆ ಕಾಂಗ್ರೆಸ್‍ನಲ್ಲಿ ಯಾವುದೇ ಯುದ್ಧ ನಡೆಯುತ್ತಿಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಸೂರ್ಜೆವಾಲಾ ಸ್ಪಷ್ಟಪಡಿಸಿದ್ದಾರೆ.
Advertisement
ಕಾಂಗ್ರೆಸ್ ಎಲೆಕ್ಷನ್ ರೋಡ್‍ಮ್ಯಾಪ್
* ಮುಂದಿನ 75 ದಿನ ರಾಜ್ಯದಲ್ಲಿ ಸರಣಿ ಕಾರ್ಯಕ್ರಮ
* ಡಿಸೆಂಬರ್ 30 – ವಿಜಯಪುರದಲ್ಲಿ `ಕೃಷ್ಣ’ ರ‍್ಯಾಲಿ
* ಜನವರಿ 2 – ಹುಬ್ಬಳ್ಳಿಯಲ್ಲಿ `ಮಹದಾಯಿ’ ರ‍್ಯಾಲಿ
* ಜನವರಿ 8 – ಚಿತ್ರದುರ್ಗದಲ್ಲಿ ಎಸ್‍ಸಿ,ಎಸ್‍ಟಿ ರ‍್ಯಾಲಿ
* ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಅಸ್ತ್ರ
* ಸಿದ್ದರಾಮಯ್ಯ, ಡಿಕೆಶಿ ಜಂಟಿಯಾಗಿ ರಥಯಾತ್ರೆ
* ಜಾತಿ ಸಭೆಗಳಲ್ಲಿ ಏನು ಮಾತಾಡ್ಬೇಕು ಎಂಬುದಕ್ಕೆ ಸಲಹಾ ಸಮಿತಿ
* ಮೀಸಲಾತಿ ವಿಚಾರವಾಗಿ ಮೌನ ವಹಿಸಲು ಸೂಚನೆ
* ಜನವರಿ 4ನೇ ವಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಯಾತ್ರೆ