ಬಾಲಿವುಡ್ ಹಾಟ್ ನಟಿಯರಲ್ಲಿ ಒಬ್ಬರಾಗಿರುವ ಮಲ್ಲಿಕಾ ಶೆರಾವತ್ ಸದ್ಯ `RK/RKAY’ ಚಿತ್ರದ ಮೂಲಕ ಬಿಟೌನ್ಗೆ ಕಂಬ್ಯಾಕ್ ಮಾಡಿದ್ದಾರೆ. ಈ ವೇಳೆ ತನ್ನ ಬೋಲ್ಡ್ ಸೀನ್ ಅನ್ನು ನೋಡಿದಾಗ ಫ್ಯಾನ್ಸ್ ಹೇಗೆ ರಿಯಾಕ್ಟ್ ಮಾಡುತ್ತಾರೆ ಅಂತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Advertisement
ಬಿಟೌನ್ನಲ್ಲಿ ಹಸಿಬಿಸಿ ದೃಶ್ಯಗಳ ಮೂಲಕ ಸುದ್ದಿಯಾದ ನಟಿ ಮಲ್ಲಿಕಾ ಶೆರಾವತ್, `ಮರ್ಡರ್’ ಚಿತ್ರದಲ್ಲಿ ಬೋಲ್ಡ್ ದೃಶ್ಯದ ಮೂಲಕ ಪಡ್ಡೆಹುಡುಗರ ಗಮನ ಸೆಳೆದ ನಟಿ, ಮಲ್ಲಿಕಾ ಸಿನಿಮಾಗಳನ್ನ ಇಂದಿಗೂ ನೋಡಿ ಅಭಿಮಾನದಿಂದ ಕಾಣುವವರಿದ್ದಾರೆ. ಇದೀಗ ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲ್ಲಿಕಾ, ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ನನ್ನನ್ನು ದ್ವೇಷಿಸುತ್ತಾರೆ ಎಂದು ಮಲ್ಲಿಕಾ ಮಾತನಾಡಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್
Advertisement
ಸಿನಿಮಾದಲ್ಲಿ ನನ್ನ ಬೋಲ್ಡ್ ದೃಶ್ಯಗಳನ್ನು ನೋಡಿದಾಗ ನನ್ನನ್ನು ಕೀಳಾಗಿ ಕಂಡಿದ್ದು ಇದೆ. ನನ್ನ ಚಿತ್ರಗಳಿಗೆ ಪುರುಷರು ಬೆಂಬಲಿಸುತ್ತಿದ್ದರು. ಆದರೆ ಯುವತಿಯರು ನನ್ನ ವಿರುದ್ಧವಾಗಿ ಮಾತನಾಡುತ್ತಿದ್ದರು. ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ದ್ವೇಷಿಸುತ್ತಾರೆ ಎಂದು ಸಂದರ್ಶನದ ವೇಳೆ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಹಿಂದಿನ ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.