ಮುಂಬೈ: ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಬೇಕು ಎಂದು ಹೇಳಿದ್ದರು ಎಂಬ ವಿಷಯವನ್ನು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಮಲ್ಲಿಕಾ ತಮ್ಮ ‘ಬೂ ಸಬ್ಕಿ ಫಟೇಗಿ’ ಚಿತ್ರತಂಡದ ಜೊತೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾ ಅತಿಥಿಗಳಾಗಿದ್ದ ಏಕ್ತಾ ಕಪೂರ್, ತುಷಾರ್ ಕಪೂರ್ ಹಾಗೂ ಮಲ್ಲಿಕಾ ಶೆರಾವತ್ ಜೊತೆ ತಮಾಷೆ ಮಾಡುತ್ತಿದ್ದರು.
ಕಪಿಲ್ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆ ಮಾತನಾಡುತ್ತಿದ್ದಾಗ ಮಲ್ಲಿಕಾ ಅವರ ಹಾಟ್‍ನೆಸ್ ಬಗ್ಗೆ ಮಾತನಾಡುತ್ತಿದ್ದರು. ಮೊದಲು ಒಂದು ಕಾಲ ಪಾಪ್ಯೂಲರ್ ಆಗಿತ್ತು. ಜನರು ಚಪಾತಿಯನ್ನು ಬಿಸಿ ಮಾಡಲು ನಿಮ್ಮ ಪೋಸ್ಟರ್ ಅಥವಾ ನಿಮ್ಮ ಫೋಟೋ ಇರುವ ನ್ಯೂಸ್‍ಪೇಪರ್ ಉಪಯೋಗಿಸುತ್ತಿದ್ದರು ಎಂದು ಹೇಳಿದರು.
ಕಪಿಲ್ ಹೇಳಿದ ಮಾತಿಗೆ ಮಲ್ಲಿಕಾ ಇದು ನಿಜ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ ಶೂಟಿಂಗ್ ಸಮಯದಲ್ಲಿ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ನನ್ನ ಹಾಟ್‍ನೆಸ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಮಲ್ಲಿಕಾ ತಿಳಿಸಿದರು.
ಮಲ್ಲಿಕಾ ಈಗ ಏಕ್ತಾ ಕಪೂರ್ ವೆಬ್ ಸಿರೀಸ್‍ನ `ಬೂ ಸಬ್ಕಿ ಫಟೇಗಿ’ಯಲ್ಲಿ ನಟಿಸುತ್ತಿದ್ದಾರೆ. ಮಲ್ಲಿಕಾ, ನಟ ತುಷಾರ್ ಜೊತೆ ನಟಿಸುತ್ತಿದ್ದು, ಬೂ ಸಬ್ಕಿ ಫಟೇಗಿ ಮೂಲಕ ಅವರು ಡಿಜಿಟಲ್‍ನಲ್ಲಿ ಡೆಬ್ಯೂ ಮಾಡಲಿದ್ದಾರೆ. ಇದು ಹಾರರ್ ಹಾಗೂ ಕಾಮಿಡಿ ಚಿತ್ರ ಎಂದು ಹೇಳಲಾಗುತ್ತಿದೆ