ಕಲಬುರಗಿ: ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಆತನನ್ನು ಬಚ್ಚಾ ಅಂತಾ ಕರೆಯಬಾರದು ಅಂತೆ. ಅವನೊಬ್ಬ ಲುಚ್ಚಾ ಅಂತ ಮಾಲೀಕಯ್ಯ ಗುತ್ತೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಿತ್ತಾಪುರದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರಕ್ಕೆ ಚುನಾವಣೆಯ ಸಂದರ್ಭದಲ್ಲಿ ನಾನು ಮತ್ತೆ ಬರ್ತೀನಿ. ಸಭೆಯಲ್ಲಿದ್ದ ಎಲ್ಲರು ನನ್ನ ನಂಬರ್ ಬರೆದುಕೊಳ್ಳಿ ಅಂತಾ ಹೇಳಿ ಮಾಲೀಕಯ್ಯ ತನ್ನ ಫೋನ್ ನಂಬರ್ ನೀಡಿದ್ದಾರೆ.
Advertisement
ಬಳಿಕ ನಿಮಗೆ ಯಾರಾದ್ರು ತೊಂದ್ರೆ ಕೊಟ್ಟರೆ ತಕ್ಷಣ ನನಗೆ ಕರೆ ಮಾಡಿ. ಚಿತ್ತಾಪುರದಲ್ಲಿ ಯಾರಿಗೂ ಕೂಡ ಭಯ ಪಡುವಂತಿಲ್ಲ. ಕಾಂಗ್ರೆಸ್ ನಲ್ಲಿ ಏನೇ ಆಗಬೇಕಾದ್ರೂ ಖರ್ಗೆ ಚೇಲಾಗಳಿಗೆ ಆಗಬೇಕು. ಹಾಗಾಗಿಯೇ ಇಂದು ಕಾಂಗ್ರೆಸ್ ಮುಕ್ತ ಮಾಡೋದಕ್ಕೆ ನಾನು ಪಣ ತೊಟ್ಟಿದ್ದೆನೆ. ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಅವನೊಬ್ಬ ಲುಚ್ಚಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕರ್ನಾಟಕದಲ್ಲಿ ಕೌರವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಮಾಡ್ತಿದೆ. ಬಿಜೆಪಿಯಲ್ಲಿ ನ್ಯಾಯದ ಬತ್ತಳಿಕೆ ಇದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರದ ಬತ್ತಳಿಕೆ ಇದೆ. ಕಲಬುರಗಿ ಭಾಗದಲ್ಲಿ ಧರ್ಮಸಿಂಗ್ ಖರ್ಗೆ ಸಂಗ್ಯಾ ಬಾಳ್ಯಾ ಇದ್ದ ಹಾಗೆ. ಒಬ್ಬರಿಗೆ ಮಂತ್ರಿ ಮಾಡಿದ್ರೆ ಮತ್ತೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಖರ್ಗೆ ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಆಗ ನಮ್ಮ ತಂದೆ ವೆಂಕಯ್ಯ ಕೂಸಯ್ಯ ಗುತ್ತೆದಾರ್ ಬಂಗಾರಪ್ಪನಿಗೆ ಹೇಳಿ ಮಂತ್ರಿ ಸ್ಥಾನ ಕೊಡಿಸಿದ್ದರು. ಈ ಮಾತು ಹೇಳೊ ಪರಿಸ್ಥಿತಿ ಬರ್ತಿರಲಿಲ್ಲ. ಆದ್ರೆ ಖರ್ಗೆ ಮಗ ಬಹಳ ಮುಂದು ಹೋಗಿದ್ದಾನೆ ಅದಕ್ಕೆ ಹೇಳುತ್ತಿದ್ದೇನೆ. ಈ ಮಾತು ಸುಳ್ಳು ಆದ್ರೆ ಬುದ್ಧವಿಹಾರಕ್ಕೆ ಬರಲಿ ಖರ್ಗೆ ಅಲ್ಲೇ ಆಣೆ ಪ್ರಮಾಣ ಮಾಡೋಣ ಅಂತ ಗುತ್ತೇದಾರ್ ಹೇಳಿದ್ದಾರೆ.
Advertisement
ಕಲಬುರಗಿಯ ಅಫ್ಜಲ್ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಗುತ್ತೇದಾರ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.