ಚಿಕ್ಕಮಗಳೂರು: ರಸ್ತೆ ಮೇಲೆ ಗುಡ್ಡ ಕುಸಿದ ಕಾರಣದಿಂದ ಬೆಳಗ್ಗಿನಿಂದಲೂ ಸಂಚಾರ ಬಂದ್ ಆಗಿದ್ದ ಮಗಳೂರು-ಕುದುರೆಮುಖ ನಡುವಿನ ಸಂಚಾರ ಆರಂಭವಾಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ರಸ್ತೆ ಮೇಲೆ ಮಣ್ಣು ಕುಸಿದಿತ್ತು, ಪರಿಣಾಮ ಬೆಳಗ್ಗಿನಿಂದ ಕಳಸ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ವಾಹನ ಸವಾರರು ದಾರಿ ನಡುವೆಯೇ ಪರದಾಟ ನಡೆಸಿದ್ದರು.
Advertisement
Advertisement
ಗುಡ್ಡ ಕುಸಿತ ಕುರಿತು ಮಾಹಿತಿ ಪಡೆದು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ ಪೊಲೀಸರು ತಾತ್ಕಾಲಿಕವಾಗಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡಿ ಸಂಜೆ ವೇಳೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಲಾರಿಗಳಿಗೆ ನಿಷೇಧವಾದ ಹಿನ್ನೆಲೆಯಲ್ಲಿ ಶನಿವಾರದಿಂದ ಭಾರೀ ಗಾತ್ರದ ವಾಹನಗಳು ಈ ಮಾರ್ಗವಾಗಿ ಮಂಗಳೂರು ತಲುಪುತ್ತಿದ್ದವು. ಅದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು.
Advertisement
ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕಾರ್ಯಾಚರಣೆ ನಡೆಲು ಪೊಲೀಸರು ಹೆಚ್ಚು ಶ್ರಮ ವಹಿಸಿದ್ದು, ಮಳೆ ಮುಂದುವರಿದಿರುವ ಕಾರಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬಿಡುಬಿಟ್ಟಿದ್ದಾರೆ. ಇದನ್ನು ಓದಿ: ಮಲೆನಾಡಲ್ಲಿ ಗುಡ್ಡ ಕುಸಿತ: ಕುದುರೆಮುಖ ಸಂಪೂರ್ಣ ಬಂದ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv