ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ (Malegaon Blast Case) ಬಿಜೆಪಿಯ (BJP) ಮಾಜಿ ಸಂಸದೆ ಪ್ರಜ್ಞಾ ಠಾಕೂರ್ (Pragya Singh Thakur) ಸೇರಿ ಎಲ್ಲಾ 7 ಆರೋಪಿಗಳಿಗೂ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಎನ್ಐಎ ವಿಶೇಷ ಕೋರ್ಟ್ (NIA Court) ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್, ಮೇ 8ರಂದು ಕೋರ್ಟ್ನಲ್ಲಿ ಹಾಜರಿರುವಂತೆ ಆರೋಪಿಗಳಿಗೆ ಸೂಚಿಸಿತ್ತು. ನ್ಯಾಯಾಧೀಶರಾದ ಎ.ಕೆ.ಲಾಹೋಟಿ ಅವರು, ತೀರ್ಪು ಪ್ರಕಟಿಸಲು ಹೆಚ್ಚಿನ ಸಮಯ ಬೇಕು. ಜುಲೈ 31ರಂದು ಎಲ್ಲಾ ಆರೋಪಿಗಳು ಹಾಜರಿರಬೇಕು’ ಎಂದು ಆರೋಪಿಗಳಿಗೆ ತಿಳಿಸಿದ್ದರು. ಇದನ್ನೂ ಓದಿ: ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ
ಏನಿದು ಪ್ರಕರಣ?
2008ರ ಸೆ.29ರಂದು ರಂಜಾನ್ ಮಾಸದಲ್ಲಿ ನವರಾತ್ರಿ ಆಚರಣೆಗೆ ಮುಂಚಿನ ದಿನ ಬಾಂಬ್ ಸ್ಫೋಟ ನಡೆದಿತ್ತು. ಈ ಸ್ಫೋಟದಲ್ಲಿ 6 ಜನರು ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಪ್ರಕರಣವನ್ನು ಮುಂಬೈ ಭಯೋತ್ಪಾದಕ ನಿಗ್ರಹ ಪಡೆ ಪ್ರಾಥಮಿಕ ತನಿಖೆ ನಡೆಸಿತ್ತು. ನಂತರ ತನಿಖೆಯ ಹೊಣೆಯನ್ನು ಎನ್ಐಎ ವಹಿಸಿಕೊಂಡಿತ್ತು. ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿತ್ತು. ಇದನ್ನೂ ಓದಿ: ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ: ಅಮಿತ್ ಶಾ