ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಸ್ಟಿಚ್ ಮಾಡಲು ಅಳತೆ ತೆಗೆದುಕೊಳ್ಳುವಂತಿಲ್ಲ – ಯುಪಿ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪ್ರಸ್ತಾವನೆ

Public TV
2 Min Read
AI Image
AI Image

– ಮಹಿಳೆಯರ ಸುರಕ್ಷತೆ, ಭದ್ರತೆಗೆ ಹಲವು ಪ್ರಸ್ತಾವ ಸರ್ಕಾರದ ಮುಂದಿಟ್ಟ ಮಹಿಳಾ ಆಯೋಗ
– ಮಹಿಳೆಯರಿಗೆ ಜಿಮ್, ಯೋಗಾಸನ ಪುರುಷರು ಹೇಳಿಕೊಡುವಂತಿಲ್ಲ

ಲಕ್ನೋ: ಮಹಿಳೆಯರ ಸುರಕ್ಷತೆ, ಭದ್ರತೆಗಾಗಿ ಉತ್ತರಪ್ರದೇಶದ (Uttar Pradesh) ಮಹಿಳಾ ಆಯೋಗ (Women Commission) ಸರ್ಕಾರದ ಮುಂದೆ ಹಲವು ಪ್ರಸ್ತಾವನೆಗಳನ್ನು ಇರಿಸಿದೆ.

ರಾಜ್ಯದಲ್ಲಿನ ಮಹಿಳೆಯರ ಸುರಕ್ಷತೆಯ (Women Safety) ದೃಷ್ಟಿಯಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮಹಿಳಾ ಆಯೋಗವು ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿದೆ.ಇದನ್ನೂ ಓದಿ: Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಮುಖ್ಯ ಉದ್ದೇಶದಿಂದ ಮಹಿಳಾ ಆಯೋಗ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಿದೆ. ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪುರುಷ ಟೈಲರ್‌ಗಳು ಇನ್ನು ಮುಂದೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳುವಂತಿಲ್ಲ. ಜಿಮ್‌ಗಳಲ್ಲಿ ಅಥವಾ ಯೋಗ ತರಬೇತಿ ಕೇಂದ್ರಗಳಲ್ಲಿ ಪುರುಷರು ಮಹಿಳೆಯರಿಗೆ ತರಬೇತಿ ನೀಡುವಂತಿಲ್ಲ. ಶಾಲಾ ಬಸ್‌ಗಳಲ್ಲಿ ಮಹಿಳಾ ಸಿಬ್ಬಂದಿ, ಮಹಿಳೆಯರಿಗೆ ಉಡುಪುಗಳಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರುವಂತೆ ಶಿಫಾರಸು ಮಾಡಿದೆ.

ಲಕ್ನೋದಲ್ಲಿ ಅ.28 ರಂದು ನಡೆದ ಸಭೆಯಲ್ಲಿ ಈ ಸಲಹೆಗಳ ಕುರಿತು ಚರ್ಚಿಸಲಾಯಿತು. ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪರಿಹರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚಿಂತನೆ ನಡೆಸಲಾಯಿತು. ಇದೇ ವೇಳೆ ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ಮಾತನಾಡಿ, ಪ್ರಸ್ತಾವನೆಗೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ಚರ್ಚೆಯನ್ನು ನಡೆಸಲಾಗಿದ್ದು, ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಅನುಮೋದನೆಗೊಂಡ ನಂತರ ಪ್ರಸ್ತಾವನೆಗಳ ಅನುಷ್ಠಾನಕ್ಕಾಗಿ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.

ಶಾಮ್ಲಿ ಜಿಲ್ಲಾ ಪರೀಕ್ಷಾಧಿಕಾರಿ ಹಮೀದ್ ಹುಸೇನ್ ಮಾತನಾಡಿ, ಈಗಾಗಲೇ ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮಹಿಳಾ ಜಿಮ್‌ಗಳು, ಯೋಗ ಕೇಂದ್ರಗಳಲ್ಲಿ ಕಡ್ಡಾಯ ಮಹಿಳಾ ತರಬೇತುದಾರರು ಅಥವಾ ಶಿಕ್ಷಕರು ಮತ್ತು ಡಿವಿಆರ್ ಹೊಂದಿರುವ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದಲಿತ ಯುವತಿಗೆ ನಿಂದನೆ – ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್‌ಐಆ‌ರ್

ಬಾಟಿಕ್ ಸೆಂಟರ್‌ಗಳಲ್ಲಿ ಸಕ್ರಿಯ ಸಿಸಿಟಿವಿ ಮಾನಿಟರಿಂಗ್‌ನೊಂದಿಗೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಿಕೊಳ್ಳಬೇಕು. ಕೋಚಿಂಗ್ ಸೆಂಟರ್‌ಗಳು ಸಿಸಿಟಿವಿ ಕಣ್ಗಾವಲು ಮತ್ತು ಸರಿಯಾದ ಶೌಚಾಲಯ ಹಾಗೂ ವಿಶ್ರಾಂತಿ ಕೋಣೆಗಳನ್ನು ಹೊಂದಿರಬೇಕು ಎಂದರು.

Share This Article