ಝಾಗ್ರೆಬ್: ಪ್ರೀತಿಗಾಗಿ ಸಾಗರವನ್ನೇ ದಾಟಿ ಬರುವ ಪ್ರೇಮಿಗಳಿದ್ದಾರೆ. ಆದರೆ ಇನ್ನೊಂದು ಕೊಕ್ಕರೆ ತನ್ನ ಪ್ರೇಯಸಿಗಾಗಿ ಪ್ರತಿ ವರ್ಷ ಸಾವಿರಾರು ಮೈಲಿಗಳ ದೂರ ಹಾರಿಕೊಂಡು ಬರುತ್ತಿದೆ.
ಇದು ಕ್ರೋಷಿಯಾ ದೇಶದಲ್ಲಿರುವ ಕ್ಲಿಪೀಟನ್ ಹಾಗೂ ಮಲೇನಾ ಎಂಬ ಎರಡು ಹಕ್ಕಿಗಳ ಲವ್ ಸ್ಟೋರಿ. ಗಂಡು ಹಕ್ಕಿ ತನ್ನ ಪ್ರೇಯಸಿಯಾದ ಹೆಣ್ಣು ಹಕ್ಕಿ ಅಂಗವಿಕಲವಾಗಿದ್ದು, ಹಾರಲು ಸಾಧ್ಯವಾಗದ ಕಾರಣ ಗಂಡು ಹಕ್ಕಿ ಪ್ರತಿ ವರ್ಷ 14 ಸಾವಿರ ಕಿ.ಮೀ ದೂರದಿಂದ ತನ್ನ ಪ್ರೀತಿಯನ್ನ ಹುಡುಕಿಕೊಂಡು ಬರುತ್ತದೆ.
Advertisement
Advertisement
ದಕ್ಷಿಣ ಆಫ್ರಿಕಾದ ಚಳಿಗಾಲದ ಮನೆಯನ್ನು ಬಿಟ್ಟು ಕ್ಲಿಪೀಟನ್ ಇದೇ ಮಾರ್ಚ್ ನಲ್ಲಿ ಸತತ 16ನೇ ಬಾರಿಗೆ ಕ್ರೋಷಿಯಾದ ಸಣ್ಣ ಗ್ರಾಮವಾದ ಬ್ರೋಡ್ಸ್ಕಿ ವಾರೋಸ್ ಗೆ ಬಂದಿದೆ. ಇಲ್ಲಿಗೆ ಬಂದು ತನ್ನ ಪ್ರೇಯಸಿ ಮಲೇನಾಳನ್ನ ಭೇಟಿಯಾಗಿದೆ.
Advertisement
ಈ ಜೋಡಿಗೆ ಈಗಾಗಲೇ 62 ಮರಿಗಳಿದ್ದು, ಈಗ ಮತ್ತಷ್ಟು ಮರಿಗಳನ್ನ ಮಾಡಲು ಸಿದ್ಧವಾಗಿವೆ. 1993ರಲ್ಲಿ ಬೇಟೆಗಾರರ ಗುಂಡೇಟಿನಿಂದ ಗಾಯಗೊಂಡಿದ್ದ ಮಲೇನಾ ಕೊಳವೊಂದರ ಬಳಿ ಬಿದ್ದಿದ್ದಾಗ ಅದನ್ನು ನೋಡಿದ ಸ್ಟೀಫನ್ ವೋಕಿಕ್ ಎಂಬವರು ಹಕ್ಕಿಯನ್ನ ತಂದು ಸಾಕಿಕೊಂಡಿದ್ದಾರೆ.
Advertisement
ಗಂಡು ಹಕ್ಕಿ ಕ್ಲಿಪೀಟನ್ ಇಲ್ಲಿಗೆ ಬಂದು ಮರಿ ಮಾಡುತ್ತದೆ. ನಂತರ ಮರಿಗಳಿಗೆ ಹಾರುವುದನ್ನು ಕಲಿಸಿ ಆಗಸ್ಟ್ ತಿಂಗಳಲ್ಲಿ ಅವುಗಳ ಜೊತೆ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುತ್ತದೆ. ಇತ್ತ ಮಲೆನಾ ತನ್ನ ಮಾಲೀಕ ವೀಕಿಕ್ ಜೊತೆ ಇರುತ್ತದೆ. ಈ ಎರಡು ಹಕ್ಕಿಗಳು ತಮ್ಮ Long Distance Relationship ನಿಂದಾಗಿ ಕ್ರೋಷಿಯಾದಲ್ಲಿ ಸೆಲೆಬ್ರಿಟಿಗಳಾಗಿವೆ.