ಚಾಮರಾಜನಗರ: ಗ್ರಹಣದ ಹಿನ್ನೆಲೆ ಬೆಳಗ್ಗೆ 8ರಿಂದ 11:30ರವರೆಗೆ ಜಿಲ್ಲೆಯ ವಿವಿಧ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಆದರೆ ಕೇತುಗ್ರಸ್ಥ ಸೂರ್ಯ ಗ್ರಹಣವಿದ್ದರೂ ಸಹ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರು ಮಾದಪ್ಪನ ದರ್ಶನ ಪಡೆದರು.
ಬೆಳಗ್ಗೆ 8 ಗಂಟೆಗೂ ಮೊದಲೇ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ದಾಸೋಹ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸಂಜೆ 4ರಿಂದ 7ರವರೆಗೆ ದೇಗುಲದಲ್ಲಿ ವಿಶೇಷ ಪೂಜೆ ಜರುಗುವುದರಿಂದ ಪ್ರಮುಖ ದ್ವಾರಗಳನ್ನು ಮುಚ್ಚಲಾಗಿತ್ತು. ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
Advertisement
Advertisement
ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಶಸ್ವಾಮಿ ದೇಗುಲವನ್ನು ಬೆಳಗ್ಗೆ 5.30ರಿಂದ 1 ಗಂಟೆಯವರೆಗೆ ಮುಚ್ಚಲಾಗಿತ್ತು. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಶ್ರಿರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯ ಪ್ರಸನ್ನ ಮೀನಾಕ್ಷಿ, ಸೋಮೇಶ್ವರ ಮತ್ತು ಆದಿಶಕ್ತಿ ಮಾರಮ್ಮನ ದೇವಾಲಯಗಳಲ್ಲಿ ಸೂರ್ಯಗ್ರಹಣ ಇರುವುದರಿಂದ ಇಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12.30ವರೆಗೆ ದೇವರ ದರ್ಶನಕ್ಕೆ ಅವಕಾಶವಿರಲಿಲ್ಲ.
Advertisement
Advertisement
ಇತ್ತ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ, ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಸೂರ್ಯಗ್ರಹಣ ಪೂರೈಸಿದ ನಂತರ ತೆರೆಯಲಾಯಿತು. ಗ್ರಹಣ ಕಾಲ ಕಳೆದ ನಂತರ ಬಾಗಿಲು ತೆರೆದ ದೇವಸ್ಥಾನಗಳಲ್ಲಿ ವಿಶೇಷ ಹೋಮ-ಹವನಗಳನ್ನು ನೆರವೇರಿಸಲಾಯಿತು.