ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರಸ್ವಾಮಿ (Male Mahadeshwara Temple) ದೇಗುಲದ ಹುಂಡಿ ಹಣ ಎಣಿಕೆ ನಡೆದು, ಬರೋಬ್ಬರಿ 2.7 ಕೋಟಿ ಹಣ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಈ ಕುರಿತು ಮಾಹಿತಿ ನೀಡಿದ್ದು, 34 ದಿನಗಳಿಗೆ ಹುಂಡಿಯಲ್ಲಿ 2,77,99,396 ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು
- Advertisement3
ಭಕ್ತರು ಕಾಣಿಕೆ ರೂಪದಲ್ಲಿ 73 ಗ್ರಾಂ ಚಿನ್ನ ಹಾಗೂ 3.9 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದಾರೆ.
- Advertisement
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, ಶಕ್ತಿ ಯೋಜನೆ ಪರಿಣಾಮ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು. ಈ ಹಿನ್ನೆಲೆ ಕೇವಲ 34 ದಿನಗಳಿಗೆ 2.77 ಕೋಟಿ ಹಣ ಸಂಗ್ರಹವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಹಾಡಿ ಹೊಗಳಿದ ಪ್ರತಾಪ್ ಸಿಂಹ