ಚಾಮರಾಜನಗರ: ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆ ಇಂದಿನಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಎಲ್ಲಾ ಸೇವೆಗಳನ್ನು ಪುನಾರಂಭಗೊಳಿಸಲು ಡಿಸಿ ಡಾ.ಎಂ.ಆರ್.ರವಿ ಆದೇಶಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು ಜಾತ್ರೆಗಷ್ಟೇ ನಿಬರ್ಂಧ ಮುಂದುವರೆದಿದ್ದು, ಉಳಿದಂತೆ ದಾಸೋಹ, ಚಿನ್ನದ ರಥ, ಬಸವ-ರುದ್ರಾಕ್ಷಿ ವಾಹನ, ಲಾಡು ಪ್ರಸಾದ ಜೊತೆಗೆ ಮುಖ್ಯವಾಗಿ ಒಂದು ವರ್ಷದ ಬಳಿಕ ಮುಡಿಸೇವೆ ಮತ್ತೆ ಇಂದಿನಿಂದ ಆರಂಭಗೊಂಡಿದೆ. ಇದನ್ನೂ ಓದಿ: ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ, ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ – ಸಿದ್ದರಾಮಯ್ಯ ಕಿಡಿ
ಡಿಸಿ ಅದೇಶದ ಬೆನ್ನಲ್ಲೇ ದಾಸೋಹ ಭವನದಲ್ಲಿ ಉಪಾಹಾರ ನೀಡಲಾಗುತ್ತಿದ್ದು, ಲಾಡು ಸೇವೆ ಸಂಜೆಯಿಂದ ಪ್ರಾರಂಭವಾಗಲಿದೆ. ಆದರೆ ಜಾತ್ರೆ, ತೆಪ್ಪೋತ್ಸವ ಆಚರಣೆಗೆ ನಿರ್ಬಂಧ ಇದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು