ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯ; ನಾಣ್ಯ ರೂಪದಲ್ಲೇ 13 ಲಕ್ಷ ರೂ. ಕಾಣಿಕೆ

Public TV
1 Min Read
male mahadeshwara hill money

ಚಾಮರಾಜನಗರ: ಮಲೆ ಮಹದೇಶ್ವರ (Male Mahadeshwara Hill) ಮತ್ತೆ ಕೋಟಿ ಒಡೆಯನಾಗಿದ್ದಾನೆ. ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, 2.90 ಕೋಟಿ ರೂ. ಸಂಗ್ರಹವಾಗಿದೆ.

ಶಕ್ತಿ ಯೋಜನೆ ಎಫೆಕ್ಟ್ ಮಹದೇಶ್ವರ ಬೆಟ್ಟಕ್ಕೆ ಮಹಿಳಾ ಭಕ್ತರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ಹೊಸ ವರ್ಷದ ಸಂಭ್ರಮ ಹಿನ್ನೆಲೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಕ್ರಿಮಿನಲ್‍ಗಳು ನಮ್ಮ ಪಕ್ಷದ ಪಿಲ್ಲರ್‌ಗಳು ಎಂದು ಬಿಜೆಪಿ ಘೋಷಿಸಲಿ: ಪ್ರಸಾದ್ ಅಬ್ಬಯ್ಯ

mahadeshwara hill money

ಮಲೆ ಮಹದೇಶ್ವರನ ಹುಂಡಿಯಲ್ಲಿ 2.90 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದು ಕಳೆದ ಒಂದು ತಿಂಗಳ ಅವಧಿಯಲ್ಲಿ ಭಕ್ತರು ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,90,00,732 ರೂಪಾಯಿ ಕಾಣಿಕೆ ಸಮರ್ಪಿಸಿದ್ದಾರೆ.

ಈ ಪೈಕಿ 13 ಲಕ್ಷ ರೂ.ಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಸಲ್ಲಿಸಿರುವುದು ವಿಶೇಷವಾಗಿದೆ. ನಗದು ಜೊತೆಗೆ 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿಯನ್ನು ಭಕ್ತರ ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದಲ್ಲದೇ 23 ಅಮೆರಿಕನ್ ಡಾಲರ್‌, ಕೆನಡಾದ 100 ಡಾಲರ್, ಓಮನ್ ದೇಶದ 4 ರಿಯಾಲ್ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.

ಚಲಾವಣೆಯಲ್ಲಿ‌ ಇಲ್ಲದ 2,000 ಮುಖಬೆಲೆಯ 12 ನೋಟುಗಳು‌ ಸಹ ಹುಂಡಿಯಲ್ಲಿ ‌ಕಂಡು ಬಂದಿವೆ. ಇದನ್ನೂ ಓದಿ: ಕಠಿಣ ಕ್ರಮ ಕೈಗೊಳ್ಳದಿದ್ರೆ ನಾನೇ NCP ನಾಯಕನ ಕೊಲೆ ಮಾಡ್ತೀನಿ: ಅಯೋಧ್ಯೆ ಅರ್ಚಕ ಕಿಡಿ

Share This Article