ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ಅನಾರೋಗ್ಯದಿಂದಾಗಿ ಗಂಡು ಚಿರತೆಯೊಂದು ಸಾವನ್ನಪ್ಪಿದೆ.
2023ರಲ್ಲಿ ಮೂರು ತಿಂಗಳ ಮರಿ ಆಗಿದ್ದಾಗ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ಆಗಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೋಗ್ಯವಾಗಿ ಓಡಾಡಿಕೊಂಡಿತ್ತು.ಇದನ್ನೂ ಓದಿ:ಜೆಫ್ರಿ ಎಪ್‌ಸ್ಟೀನ್ ಸೆಕ್ಸ್ ಹಗರಣದ ಫೈಲ್ ಬಿಡುಗಡೆಗೆ ಟ್ರಂಪ್ ಸಹಿ
ಅ.30ರಿಂದ ಚಿರತೆ ಏಕಾಏಕಿ ಆಹಾರ ಸೇವನೆ ಕಡಿಮೆ ಮಾಡಿ, ತೀವ್ರ ಜ್ವರದಿಂದ ಬಳಲೋಕೆ ಶುರುಮಾಡಿತ್ತು. ಬಳಿಕ ಚಿರತೆಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಜೊತೆಗೆ ಸೂಕ್ತ ಚಿಕಿತ್ಸೆ ಆರಂಭಿಸಿದ್ದರಿಂದ ಸ್ವಲ್ಪ ಆಹಾರ ಸೇವನೆ ಮಾಡುತ್ತಾ, ಚೇತರಿಕೆ ಕಂಡುಬಂದಿತ್ತು. ಮಾಂಸದಲ್ಲಿಯೇ ಔಷಧಿಯನ್ನು ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು, ಆದರೆ ಕೆಲವು ದಿನಗಳಿಂದ ಆಹಾರ ಸೇವನೆ ನಿಲ್ಲಿಸಿ, ನಿಯಂತ್ರಣ ಕಳೆದುಕೊಂಡು ಇಂದು ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

