ಮಾಲೆ/ನವದೆಹಲಿ: ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ ಪೇಚೆಗೆ ಸಿಲುಕಿದ ಮಾಲ್ಡೀವ್ಸ್ (Maldives) ಸರ್ಕಾರ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ಭಾರತಕ್ಕೆ ಬರಲು ಮುಂದಾಗಿದ್ದಾರೆ.
We, d Democrats, r dedicated to upholding d stability of the nation's foreign policy n preventing d isolation of any neighboring country.
R u willing to take all necessary steps to remove prez @MMuizzu from power? Is @MDPSecretariat prepared to initiate a vote of no confidence?
— ???????????? ???????????????? (@aliaazim) January 8, 2024
Advertisement
ಹೌದು. ಸ್ವತ: ಮಾಲ್ಡೀವ್ಸ್ ಜನರೇ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಸರ್ಕಾರ ಮೂವರು ಸಚಿವರನ್ನು ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿತ್ತು. ಈಗ ಮೊಹಮ್ಮದ್ ಮಿಜು ವಿರುದ್ಧ ಈಗ ವಿಪಕ್ಷ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಮೊಹಮ್ಮದ್ ಮಿಜು ಭಾರತ (India) ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.
Advertisement
Advertisement
ಮಾಲ್ಡೀವ್ಸ್ ಸರ್ಕಾರ ಈ ಪ್ರಸ್ತಾಪವನ್ನು ಭಾರತದ ಮುಂದಿಟ್ಟರೂ ಮೋದಿ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮೊದಲು ಮಾಲ್ಡೀವ್ಸ್‌ನಲ್ಲಿದ್ದ ಸರ್ಕಾರ ಭಾರತದ ಪರವಾಗಿತ್ತು. ಕೋವಿಡ್ ಸಮಯಲ್ಲಿ ಭಾರತ ಲಸಿಕೆಯನ್ನು ರಫ್ತು ಮಾಡಿತ್ತು. ಹೀಗಿದ್ದರೂ ಭಾರತದ ವಿರುದ್ಧವೇ ಹೇಳಿಕೆ ನೀಡಿಯೇ ಮೊಹಮ್ಮದ್ ಮಿಜು ಅಧ್ಯಕ್ಷ ಚುನಾವಣೆಯಲ್ಲಿ ಜಯಗಳಿಸಿದ್ದರು. ಸದ್ಯ ಮೊಹಮ್ಮದ್ ಮಿಜು ಚೀನಾ ಪ್ರವಾಸದಲ್ಲಿದ್ದಾರೆ.
Advertisement
ಜೋರಾದ ಅಭಿಯಾನ: ಮಾಲ್ಡೀವ್ಸ್ ಪ್ರವಾಸಿ ಕಂಪನಿಗಳು ಭಾರತದ ವ್ಲಾಗರ್ಸ್‌ಳ ಪ್ರವಾಸದ ವೆಚ್ಚವನ್ನು ಭರಿಸಿ ಪ್ರಚಾರ ಮಾಡುತ್ತಿವೆ. ಈ ರೀತಿಯ ಪ್ರವಾಸ ಮಾಡಿ ವಿಡಿಯೋ ಮಾಡುವ ಕಂಟೆಂಟ್ ಕಿಯೇಟರ್ಸ್‌ಗಳನ್ನುಅನ್‌ಫಾಲೋ ಮಾಡಬೇಕು ಎಂಬ ಅಭಿಯಾನ ಈಗ ಆರಭವಾಗಿದೆ.
ಸಚಿವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದರೂ ಭಾರತೀಯರ ಅಭಿಯಾನ ಮಾತ್ರ ನಿಲ್ಲುತ್ತಿಲ್ಲ. ಕಳೆದ ನಾಲ್ಕು ದಿನಗಳದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್ ಟ್ರೆಂಡಿಂಗ್ ಟಾಪಿಕ್ ಆಗಿದೆ. ಅಷ್ಟೇ ಅಲ್ಲದೇ ಮಾಲ್ಡೀವ್ಸ್ ಪ್ರವಾಸಕ್ಕೆ ಬುಕ್ ಮಾಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆ ಆಗುತ್ತಿದೆ.
ಮಾಲ್ಡೀವ್ಸ್ ಪ್ರಮುಖ ಆದಾಯ ಪ್ರವಾಸೋದ್ಯಮವೇ ಆಗಿದ್ದು, ಅದರಲ್ಲೂ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈಗ ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ ಸಚಿವರ ಹೇಳಿಕೆಯನ್ನು ಖಂಡಿಸಿದೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು