ಮಾಲೆ: ಭಾರತ ವಿರೋಧಿ ನಿಲುವು ತೆಳೆದು, ಚೀನಾ ಪರ ವಾಲಿರುವ ಮಾಲ್ಡೀವ್ಸ್ (Maldives) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರ ಪಕ್ಷಕ್ಕೆ ಮೇಯರ್ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು, ಭಾರತದ ಪರ ನಿಲುವು ಹೊಂದಿರುವ ಪಕ್ಷ ಜಯಗಳಿಸಿದೆ.
ಮಾಲೆಯ ಮೇಯರ್ ಚುನಾವಣೆಯಲ್ಲಿ ಸದ್ಯ ವಿರೋಧ ಪಕ್ಷವಾಗಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಭರ್ಜರಿ ಜಯ ಸಾಧಿಸಿದೆ.
Advertisement
މާލެ ސިޓީގެ އިންތިހާބީ މޭޔަރ @adamazimމާލޭ ސިޓީގެ ކެމްޕެއިން ޓީމްތަކާއި ބައްދަލުކުރެއްވުން.#FehiThanavasMale pic.twitter.com/AMZtQBiYks
— Adamazimformayor (@MayorAdamAzim) January 14, 2024
Advertisement
Advertisement
ಈ ಮೊದಲು ಮೊಹಮ್ಮದ್ ಮುಯಿಝು ಅವರು ಮೇಯರ್ ಆಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು.
Advertisement
ಎಂಡಿಪಿ ಅಭ್ಯರ್ಥಿ ಅಜೀಂ 5,303 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNP) ಪಕ್ಷದ ಐಶಾತ್ ಅಜಿಮಾ ಶಕೂರ್ ಅವರು 3,301 ಮತಗಳನ್ನು ಪಡೆದಿದ್ದಾರೆ. ಭಾರತದ ವಿರೋಧಿ ನಿಲುವು ತಳೆದಿದ್ದಕ್ಕೆ ಪಿಎನ್‌ಪಿ ಅಭ್ಯರ್ಥಿಗೆ ಸೋಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತದೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು
ಚೀನಾ ಪ್ರವಾಸ ಮುಗಿಸಿ ಬಂದಿರುವ ಮೊಹಮ್ಮದ್ ಮುಯಿಝು ಅವರು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು (Indian Army) ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಮಾರ್ಚ್ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ.