ಮಾಲೆ: ಮಾಲ್ಡೀವ್ಸ್‌ನಿಂದ (Maldives) ಭಾರತೀಯ ಸೈನಿಕರನ್ನು (Indian Army) ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ತಿಳಿಸಿದ್ದಾರೆಂದು ವರದಿಯಾಗಿದೆ.
ಮಾರ್ಚ್ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ. ಇದನ್ನೂ ಓದಿ: ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ
Advertisement
Advertisement
ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಬ್ದುಲ್ಲಾ ನಜೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಮುಯಿಝು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹಿಂತೆಗೆದುಕೊಳ್ಳಲು ಪ್ರಸ್ತಾಪಿಸಿದ್ದಾರೆ.
Advertisement
ಮಾರ್ಚ್ 15 ರ ಒಳಗೆ ಭಾರತೀಯ ಸೈನಿಕರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಲ್ಡೀವ್ಸ್ ಅಧ್ಯಕ್ಷರು ಮಾಡಿದ್ದಾರೆ. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಯಾದ ಸಭೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು
Advertisement
ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಅಬ್ದುಲ್ಲಾ ಫಯಾಜ್, ಲಾರ್ಜ್‌ನಲ್ಲಿರುವ ರಾಯಭಾರಿ ಅಲಿ ನಸೀರ್, ಭಾರತದ ಮಾಲ್ಡೀವ್ಸ್ ರಾಯಭಾರಿ ಇಬ್ರಾಹಿಂ ಶಹೀಬ್ ಮತ್ತು ರಕ್ಷಣಾ ಪಡೆಯ ಮುಖ್ಯಸ್ಥ ಅಬ್ದುಲ್ ರಹೀಂ ಅಬ್ದುಲ್ ಲತೀಫ್ ಸಭೆ ನಡೆಸಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಪ್ರಸ್ತುತ, ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 70 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಅಪಮಾನಕರ ಹೇಳಿಕೆ – ಮಾಲ್ಡೀವ್ಸ್ ಸಚಿವರ ಅಮಾನತು
ಅಧಿಕಾರ ವಹಿಸಿಕೊಂಡಿದ್ದ ಎರಡನೇ ದಿನದಂದೇ, ಮುಯಿಝು, ತನ್ನ ಸೇನಾ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಅಧಿಕೃತವಾಗಿ ವಿನಂತಿಸಿದ್ದರು.