ನವದೆಹಲಿ: ಭಾರತ (India) ಮತ್ತು ಮಾಲ್ಡೀವ್ಸ್ (Maldives) ಸಂಬಂಧಗಳು ಶತಮಾನಗಳಷ್ಟು ಹಳೆಯದು. ಭಾರತವು ಮಾಲ್ಡೀವ್ಸ್ ಅನ್ನು ನೆರೆಹೊರೆ ಮತ್ತು ಆಪ್ತ ಸ್ನೇಹಿತ ಎಂದು ಭಾವಿಸುತ್ತದೆ. ನಮ್ಮ ನೆರೆಹೊರೆ ನೀತಿ ಮತ್ತು ಸಾಗರ ದೃಷ್ಟಿಯಲ್ಲಿ ಮಾಲ್ಡೀವ್ಸ್‌ಗೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮುಯಿಝು (Mohamed Muizzu) ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನು ದೆಹಲಿಯ ಹೈದ್ರಬಾದ್ ಹೌಸ್‌ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
Advertisement
Addressing the press meet with President @MMuizzu of Maldives.https://t.co/1wB3CZgfnI
— Narendra Modi (@narendramodi) October 7, 2024
Advertisement
ಭಾರತ – ಮಾಲ್ಡೀವ್ಸ್ ನಡುವೆ ಸಂಬಂಧಗಳು ಹದಗೆಡುತ್ತಿದ್ದು, ಭಾರತೀಯ ಸೇನೆಯನ್ನು ವಾಪಸ್ ಕಳುಹಿಸಿದ ಬಳಿಕ ಚೀನಾ ಜೊತೆಗೆ ಹೆಚ್ಚು ಸಂಬಂಧ ಹೊಂದಿತ್ತು. ಈ ನಡುವೆ ಮಾಲ್ಡೀವ್ಸ್‌ಗೆ ಬೆಂಬಲ ನೀಡುವ ಭಾರತದ ಪಾತ್ರವನ್ನು ಮೋದಿ ಒತ್ತಿ ಹೇಳಿದರು. ಇದನ್ನೂ ಓದಿ: ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರು ಸಿಎಂ ಬದಲಾವಣೆ ಅವಸರದಲ್ಲಿದ್ದಾರೆ- ಬಸವರಾಜ ಬೊಮ್ಮಾಯಿ
Advertisement
ಭಾರತ-ಮಾಲ್ಡೀವ್ಸ್ ಸಂಬಂಧ ಪ್ರಮುಖವಾಗಿದೆ. ನಾವು ಯಾವಾಗಲೂ ಮಾಲ್ಡೀವ್ಸ್ ಜನರ ಆದ್ಯತೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಮೋದಿ ಹೇಳಿದರು. ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಮಾಲ್ಡೀವ್ಸ್‌ಗೆ ನಿರ್ಣಾಯಕ ಹಣಕಾಸಿನ ನೆರವು ನೀಡುವ ಭಾರತದ ನಿರ್ಧಾರವನ್ನು ಇದೇ ವೇಳೆ ಮೋದಿ ಘೋಷಿಸಿದರು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ
Advertisement
ಹಣಕಾಸಿನ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಧ್ಯಕ್ಷ ಮುಯಿಝು ಅವರು ಧನ್ಯವಾದ ಹೇಳಿದರು. ಭಾರತವು ದ್ವೀಪ ರಾಷ್ಟ್ರದ ಅಗತ್ಯದ ಸಮಯದಲ್ಲಿ ಯಾವಾಗಲೂ ಜೊತೆಯಲ್ಲಿ ನಿಂತಿದೆ ಎಂದು ಹೇಳಿದರು. ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಅವರು ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದರು. ಇದನ್ನೂ ಓದಿ: ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ
ಮಾಲ್ಡೀವ್ಸ್‌ಗೆ ಭಾರತವು ಅತಿದೊಡ್ಡ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸಲು ನಾನು ಬಯಸುತ್ತೇವೆ. ಭಾರತದ ಆರ್ಥಿಕ ಸಹಕಾರವು ಮೂಲಸೌಕರ್ಯ ಅಭಿವೃದ್ಧಿಗೂ ವಿಸ್ತರಿಸುತ್ತದೆ ಎಂದು ಮುಯಿಝು ಹೇಳಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳ| ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ- 7 ಮಂದಿ ಸಾವು, ಹಲವರಿಗೆ ಗಾಯ
ಉಭಯ ನಾಯಕರ ಭೇಟಿ ವೇಳೆ ಪಿಎಂ ಮೋದಿ ಮತ್ತು ಮುಯಿಝು ಅವರು ಭಾರತದ ಬೆಂಬಲಿತ ಯೋಜನೆಯಾದ ಮರು ಅಭಿವೃದ್ಧಿಪಡಿಸಿದ ಹನಿಮಾಧು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವರ್ಚ್ಯುವಲ್ ಆಗಿ ಉದ್ಘಾಟಿಸಿದರು. ಬಳಿಕ ಭಾರತವು ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಅನ್ನು ಪರಿಚಯಿಸಿತು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೇಳೋ ಮೊದಲು ವಿಜಯೇಂದ್ರ ರಾಜೀನಾಮೆ ನೀಡಲಿ: ಈಶ್ವರ್ ಖಂಡ್ರೆ
ಬೆಂಗಳೂರಿನಲ್ಲಿ ಮಾಲ್ಡೀವ್ಸ್ ದೂತಾವಾಸವನ್ನು ತೆರೆಯುವ ಕುರಿತು ಚರ್ಚೆ ನಡೆದಿದೆ. ಭಾರತವು ತನ್ನ ಬೆಂಬಲದೊಂದಿಗೆ ನಿರ್ಮಿಸಲಾದ 700 ಸಾಮಾಜಿಕ ವಸತಿ ಘಟಕಗಳನ್ನು ಮಾಲ್ಡೀವ್ಸ್‌ಗೆ ಹಸ್ತಾಂತರಿಸುವ ಬಗ್ಗೆ, ಮಾಲ್ಡೀವಿಯನ್ ಸರ್ಕಾರಕ್ಕೆ ಅಗತ್ಯವಾದ ಬಜೆಟ್ ಪರಿಹಾರವನ್ನು ಒದಗಿಸಲು ಭಾರತವು ಮತ್ತೊಂದು ವರ್ಷಕ್ಕೆ 50 ಮಿಲಿಯನ್ ನೀಡಲು ಮತ್ತು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಏನು ಹೈಕಮಾಂಡಾ? – ಸಿಎಂ ರಾಜೀನಾಮೆ ಹೇಳಿಕೆಗೆ ಜಮೀರ್ ತಿರುಗೇಟು