ಮಾಲೆ: ಅಧ್ಯಕ್ಷ ಮೊಹಮ್ಮದ್ ಮುಯಿಝು ( Mohamed Muizzu) ಅವರ ಒತ್ತಾಯದ ಮೇರೆಗೆ 76 ಭಾರತೀಯ ರಕ್ಷಣಾ ಸಿಬ್ಬಂದಿ ಮಾಲ್ಡೀವ್ಸ್ ತೊರೆದ ಕೆಲವೇ ದಿನಗಳಲ್ಲಿಯೇ ಭಾರತ ಕೊಡುಗೆಯಾಗಿ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್ಗಳು ದೇಶದ ಮಿಲಿಟರಿಯಲ್ಲಿ ಇನ್ನೂ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ (Ghassan Maumoon) ಟೀಕಿಸಿದ್ದಾರೆ.
Advertisement
ಭಾನುವಾರ ಮಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಆಡಳಿತದಲ್ಲಿ ವಿಮಾನವನ್ನು ಹಾರಿಸಲು ತರಬೇತಿಯನ್ನು ಪ್ರಾರಂಭಿಸಿದ ಮಾಲ್ಡೀವಿಯನ್ ಸೈನಿಕರು ಕಾರಣಾಂತರಗಳಿಂದ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಎರಡು ಹೆಲಿಕಾಪ್ಟರ್ಗಳು ಮತ್ತು ಡೋರ್ನಿಯರ್ ಅನ್ನು ಹಾರಿಸಲು ಪರವಾನಗಿ ಪಡೆದ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಪೈಲಟ್ ನಮ್ಮ ಪಡೆಯಲ್ಲಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ
Advertisement
Advertisement
ಚೀನಾ ಪರ ಧೋರಣೆಯುಳ್ಳ ನಾಯಕರಾಗಿ ಗುರುತಿಸಿಕೊಂಡಿರುವ ಮುಯಿಝು, ಮೇ 10ರ ಒಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಗಡುವು ನೀಡಿದ್ದರು. ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದ ನಂತರ ಮೇ 10 ರ ಗಡುವಿನ ಪ್ರಕಾರ, ಹೆಲಿಕಾಪ್ಟರ್ಗಳು ಮತ್ತು ಡಾರ್ನಿಯರ್ ವಿಮಾನಗಳಿಗಾಗಿ ಎರಡು ಪ್ಲಾಟ್ಫಾರ್ಮ್ಗಳನ್ನು ನಿರ್ವಹಿಸಲು ಮಾಲ್ಡೀವ್ಸ್ನಲ್ಲಿ ನೆಲೆಸಿದ್ದ ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲೆ ತೊರೆದು ಶುಕ್ರವಾರ ಭಾರತಕ್ಕೆ ಮರಳಿದ್ದರು.
Advertisement
ಭಾರತ ಸರ್ಕಾರ ಈ ಹಿಂದೆ ಉಡುಗೊರೆಯಾಗಿ ನೀಡಿದ್ದ 2 ಹೆಲಿಕಾಪ್ಟರ್ಗಳ ಮತ್ತು ಡಾರ್ನಿಯರ್ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್ ನಲ್ಲಿ ಉಳಿದುಕೊಂಡಿದ್ದರು.